ತಿಳಿದೋ ತಿಳಿಯದೆಯೋ ನಾವು ನಮ್ಮ ಯಕೃತ್ತಿನ ಮೇಲೆ ವಿಷದ ಹೊರೆಯನ್ನು ಹೇರುತ್ತೇವೆ. ಈ ವಿಷಗಳು ನೀರು, ಗಾಳಿ ಮತ್ತು ಆಹಾರದ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಇವುಗಳ ಹೊರತಾಗಿ ಜಂಕ್ ಫುಡ್, ಆಲ್ಕೋಹಾಲ್, ತಂಬಾಕು, ಸಂಸ್ಕರಿಸಿದಆಹಾರಗಳು, ಔಷಧಗಳು ಇತ್ಯಾದಿಗಳು ಯಕೃತ್ತಿನ ಮೇಲೆ ಹೊರೆಯಾಗುತ್ತವೆ.
ನಮ್ಮ ದೇಹದ ದೊಡ್ಡ ರಾಸಾಯನಿಕ ಕಾರ್ಖಾನೆಯಾಗಿರುವ ಯಕೃತ್ತು ಅಥವಾ ಲಿವರ್ ಈ ವಿಷಗಳನ್ನು ಸ್ವಚ್ಛಗೊಳಿಸಲು ಸುಸ್ತಾಗುತ್ತದೆ. ಇದಕ್ಕೂ ಕೂಡ ಬೇರೆ ಯಂತ್ರಗಳ೦ತೆ ಕೂಲಂಕುಷಪರೀಕ್ಷೆಯ ಅಗತ್ಯವಿದೆ.
Read this article in English Ayurvedic Liver Detox at Home
ಲಿವರ್ ಡಿಟಾಕ್ಸ್ ಅಥವಾ ಲಿವರನ್ನು ವಿಷ ರಹಿತ ಮಾಡುವುದು ಹೇಗೆ ?
- ಜಂಕ್ ಫುಡ್ಸ್ , ಮದ್ಯ (ಆಲ್ಕೋಹಾಲ್ ) ಮತ್ತು ಯಕೃತ್ತಿನ ಮೇಲೆ ಒತ್ತಡವನ್ನು ಉಂಟುಮಾಡುವ ಇತರ ಆಹಾರಗಳಿಂದ ದೂರವಿರಿ.
- ಸಂಸ್ಕರಿಸಿದ ಆಹಾರಗಳಿಗಿಂತ ಹೆಚ್ಚು ನೈಸರ್ಗಿಕ ಆಹಾರವನ್ನು ಸೇವಿಸಲು ಪ್ರಯತ್ನಿಸಿ.
- ತಂಪು ಪಾನೀಯಗಳ ಬದಲಿಗೆ ಸಾಕಷ್ಟುನೀರು ಕುಡಿಯಿರಿ.
- ನಿಮ್ಮ ಆಹಾರದಲ್ಲಿ ಸಾಕಷ್ಟು ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸಿಕೊಳ್ಳಿ.
ಲಿವರ್ ಡಿಟಾಕ್ಸ್ ಗಿಡಮೂಲಿಕೆಗಳು – ಲಿವರ್ ನಿಂದ ವಿಷ ತೆಗೆಯುವಂತಹ ಗಿಡಮೂಲಿಕೆಗಳು
ಕೆಳಗಿನ ಗಿಡಮೂಲಿಕೆಗಳು ಮತ್ತು ಆರೋಗ್ಯಕರ ಆಹಾರದೊಂದಿಗೆ ಯಕೃತ್ತನ್ನು ನಿರ್ವಿಷಗೊಳಿಸಬಹುದು.
ಅರಿಶಿನ
ಅರಿಶಿನವು ಯಕೃತ್ತಿನ ನಿರ್ವಿಶೀಕರಣ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಕಾಮಾಲೆಯಂತಹ ಪಿತ್ತಜನಕಾಂಗದಕಾಯಿಲೆಗಳಿಗೆ ಆಯುರ್ವೇದ ಆಚಾರ್ಯರು ಅರಿಶಿನವನ್ನು ಶಿಫಾರಸು ಮಾಡುತ್ತಾರೆ. ಅರಿಶಿನ ಬಳಸಿ ಮನೆಯಲ್ಲೇಮಾಡಬಹುದಾದ ಸರಳ ಲಿವರ್ ಡಿಟಾಕ್ಸಿಫಿಕೇಶನ್ ವಿಧಾನ ಇಲ್ಲಿದೆ.
ಒಂದು ಕಪ್ ನೀರಿನಲ್ಲಿ ಒಂದು ಚಿಟಿಕೆ ಅರಿಶಿನವನ್ನು ಕುದಿಸಿ. ಅದನ್ನು ತಣ್ಣಗಾಗಲು ಬಿಡಿ. ಒಂದು ಚಮಚ ಜೇನುತುಪ್ಪ ಮತ್ತು ಅರ್ಧಚಮಚ ನಿಂಬೆ ರಸವನ್ನು ಸೇರಿಸಿ. ಖಾಲಿ ಹೊಟ್ಟೆಯಲ್ಲಿ ದಿನಕ್ಕೆ ಮೂರು ಬಾರಿ ಇದನ್ನು ಕುಡಿಯಿರಿ. ಈ ಪ್ರಕ್ರಿಯೆಯು ಯಕೃತ್ತನ್ನುನಿರ್ವಿಷಗೊಳಿಸುವುದು ಮಾತ್ರವಲ್ಲದೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಗಿಲೋಯ್ ಅಥವಾ ಗುಡುಚಿ / ಅಮೃತ ಬಳ್ಳಿ
ಗಿಲೋಯ್ ಅಥವಾ ಗುಡುಚಿ ಆಯುರ್ವೇದ ಮೂಲಿಕೆಯಾಗಿದ್ದು, ಆಯುರ್ವೇದದಲ್ಲಿ ಇದನ್ನು ಅಮೃತ ಎಂದು ಶ್ಲಾಘಿಸಲಾಗಿದೆ. ಅಮೃತ ಬಳ್ಳಿ (ಗಿಲೋಯ್ ) ಯಕೃತ್ತಿನಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನುಕಡಿಮೆ ಮಾಡುತ್ತದೆ, ರಕ್ತದ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲುಅತ್ಯುತ್ತಮ ಮೂಲಿಕೆಯಾಗಿದೆ.
5 ರಿಂದ 6 ರಸಭರಿತವಾದ ತಾಜಾ ಗಿಲೋಯ್ ಎಲೆಗಳನ್ನು ಜಜ್ಜಿರಿ. ಬಳಕೆಗೆ ಮೊದಲು ಈ ಎಲೆಗಳನ್ನು ತೊಳೆಯಿರಿ. ಜಜ್ಜಿದ ನ೦ತರರಸವನ್ನು ಹೊರತೆಗೆಯಿರಿ (ಸುಮಾರು 10 ಮಿಲಿ). ಈ ಗಿಲೋಯ್ ರಸವನ್ನು ಸಮಾನ ಪ್ರಮಾಣದ ಜೇನುತುಪ್ಪದೊಂದಿಗೆ ಮಿಶ್ರಣಮಾಡಿ. ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ.
ಬೇವು
ಬೇವನ್ನು ರಕ್ತ ಶುದ್ಧಿಕಾರಿ ಎಂದು ಹೊಗಳಿದ್ದಾರೆ. ಈ ಮೂಲಿಕೆಯು ಯಕೃತ್ತನ್ನು ಶುದ್ಧೀಕರಿಸಲು ಮತ್ತು ಅದರ ಉರಿಯೂತವನ್ನುಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅನೇಕ ಆಯುರ್ವೇದ ವೈದ್ಯರು ಯಕೃತ್ತಿನಲ್ಲಿ ಕೊಬ್ಬು ಸ೦ಗ್ರಹವಾದಾಗ, ಅದಕ್ಕೆ ಚಿಕಿತ್ಸೆನೀಡುವ ಸ೦ದರ್ಭದಲ್ಲಿ ಬೇವನ್ನು ಬಳಸುತ್ತಾರೆ.
ಒಂದು ಹಿಡಿ ಬೇವಿನ ಎಲೆಗಳನ್ನು ತೊಳೆಯಿರಿ. ರಸವನ್ನು ಹೊರತೆಗೆಯಲು ಇವುಗಳನ್ನು ಜಜ್ಜಿ ಹಿ೦ಡಿ (ಸುಮಾರು 10 ಮಿಲಿ). ಈರಸವನ್ನು ಸಮಾನ ಪ್ರಮಾಣದ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ. ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ.
ತುಳಸಿ
ಪ್ರತಿ ಹಿಂದೂ ಮನೆಯಲ್ಲೂ ತುಳಸಿ ಗಿಡವನ್ನು ಪೂಜಿಸಲಾಗುತ್ತದೆ. ಕೆಮ್ಮು, ಶೀತ, ಚರ್ಮ ಮತ್ತು ಯಕೃತ್ತಿನ ಸಮಸ್ಯೆಗಳಂತಹಅನೇಕ ಮನೆಮದ್ದುಗಳಲ್ಲಿ ಈ ಸಸ್ಯವು ಸೂಕ್ತವಾಗಿ ಉಪಯೋಗಕ್ಕೆ ಬರುತ್ತದೆ. ಸಾಮಾನ್ಯವಾಗಿ, ಈ ಮೂಲಿಕೆಯನ್ನು ಗಿಲೋಯ್ಮತ್ತು ಬೇವಿನ ಜೊತೆಗೆ ಬಳಸಲಾಗುತ್ತದೆ.
ಭೃಂಗರಾಜ (ಎಕ್ಲಿಪ್ಟಾ ಆಲ್ಬಾ)
ಭೃಂಗರಾಜ ಯಕೃತ್ತಿಗೆ ಪ್ರಯೋಜನಕಾರಿಯಾಗುವ೦ತಹ ಗುಣಗಳನ್ನು ಹೊಂದಿದೆ. ಇದು ಯಕೃತ್ತಿನ ಮೇಲೆ ಉ೦ಟಾಗಿರುವ ವಿಷದಹೊರೆ ಕಡಿಮೆ ಮಾಡುವ ಸಾಕಷ್ಟು ಔಶಧೀಯ ಗುಣಗಳನ್ನು ಹೊಂದಿರುತ್ತದೆ. ಇದು ಯಕೃತ್ತಿನ ಒಟ್ಟಾರೆ ಕಾರ್ಯವನ್ನುಸುಧಾರಿಸುತ್ತದೆ. ಈ ಮೂಲಿಕೆಯು ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಇದು ಯಕೃತ್ತಿನಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆಯುರ್ವೇದದ ಗ್ರಂಥಗಳ ಪ್ರಕಾರ ಭೃಂಗರಾಜ ವಾತ ಮತ್ತು ಕಫವನ್ನು ಸಮತೋಲನಗೊಳಿಸುತ್ತದೆ. ಇದು ಪಿತ್ತವನ್ನು ಶಾ೦ತಗೊಳಿಸುತ್ತದೆ. ಇದು ಪಿತ್ತರಸವು ಸರಾಗವಾಗಿ ಹರಿಯುವ೦ತೆ ಸಹಾಯ ಮಾಡುತ್ತದೆ.
ಲಿವರ್ ನಿರ್ವಿಷ ಗೊಳಿಸುವ ಆಯುರ್ವೇದ ಡಯಟ್
ಹಸಿರು ತರಕಾರಿಗಳನ್ನು ಪೂರ್ತಿಯಾಗಿ ಸೇವಿಸಿ. ಲೆಟಿಸ್ನಂತಹ ಹಸಿರು ಎಲೆಗಳ ತರಕಾರಿಗಳು ಮತ್ತು ಕೋಸುಗಡ್ಡೆ ಮತ್ತು ಹೂಕೋಸುಗಳಂತಹ ಕ್ರೂಸಿಫೆರಸ್ ತರಕಾರಿಗಳನ್ನು ಆಹಾರದಲ್ಲಿ ಸೇರಿಸಿ. ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಸಂಸ್ಕರಿಸಿದ ಹಿಟ್ಟುಗಳನ್ನು ಉಪಯೋಗಿಸ ಬೇಡಿ.
ನಿಮ್ಮ ದೈನಂದಿನ ಪಾಕವಿಧಾನಗಳಿಗೆ ಬೆಳ್ಳುಳ್ಳಿ ಸೇರಿಸಿ. ಬೆಳ್ಳುಳ್ಳಿ ಯಕೃತ್ತನ್ನು ನಿರ್ವಿಷಗೊಳಿಸಲು ಮತ್ತು ಜೀವಕೋಶಗಳಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಯಕೃತ್ತಿಗೆ ಅಗತ್ಯವಾದ ಕಿಣ್ವಗಳನ್ನು ಉತ್ಪಾದಿಸಲು ಸಹಾಯಮಾಡುತ್ತದೆ, ಇದು ರಕ್ತವನ್ನು ನಿರ್ವಿಷಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಹಾಗಲಕಾಯಿ ನಂತಹ ಕಹಿ ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಹಾಗಲಕಾಯಿಯು ಯಕೃತ್ತನ್ನು ನಿರ್ವಿಷಗೊಳಿಸುತ್ತದೆಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ. ಇದರ ಸೇವನೆಯು ಚರ್ಮದ ಹೊಳಪನ್ನು ಹೆಚ್ಚಿಸಲು, ಸುಕ್ಕುಗಳು ಮತ್ತು ಮೊಡವೆಗಳನ್ನುಕಡಿಮೆ ಮಾಡಲು ಸಹಾಯ ಮಾಡುತ್ತದೆ.
15 ದಿನಕ್ಕೊಮ್ಮೆ ದ್ರವಾಹಾರದ ಉಪವಾಸವನ್ನು ಅಳವಡಿಸಿಕೊಳ್ಳಿ. ತಾಜಾ ಹಣ್ಣಿನ ರಸವನ್ನು ಸ್ವಲ್ಪ ನಿಂಬೆಹಣ್ಣಿನೊಂದಿಗೆ ಕುಡಿಯಿರಿ. ನಿಂಬೆ ಅತ್ಯುತ್ತಮ ನಿರ್ವಿಶೀಕರಣ ಏಜೆಂಟ್. ಪ್ರತಿ ದಿನ ಬೆಳಿಗ್ಗೆ ಒಂದು ಟೀಚಮಚ ನಿಂಬೆ ರಸದೊಂದಿಗೆ ಒಂದು ಲೋಟ ಬೆಚ್ಚಗಿನನೀರನ್ನು ಸೇರಿಸಿ ಸೇವಿಸಿ.
ದಿನಕ್ಕೆ ಎರಡು ಅಥವಾ ಮೂರು ಬಾರಿ ಹಸಿರು ಚಹಾವನ್ನು ( ಗ್ರೀನ್ ಟೀ ) ಕುಡಿಯಿರಿ. ಹಸಿರು ಚಹಾವು ಸಾಕಷ್ಟು ಉತ್ಕರ್ಷಣನಿರೋಧಕಗಳನ್ನು ಹೊಂದಿದೆ ಮತ್ತು ಯಕೃತ್ತಿನ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಸಲಾಡ್ಗಳಲ್ಲಿ ದೊಡ್ಡಪತ್ರೆ ಸೊಪ್ಪು ಅಥವಾ ಅಜ್ವೈನ್ ಎಲೆಗಳನ್ನು ಬಳಸಿ. ಈ ಮೂಲಿಕೆಯು ಅತ್ಯುತ್ತಮ ಲಿವರ್ ಡಿಟಾಕ್ಸ್ ಏಜೇಂಟ್ .
ಯಕೃತ್ತಿನ ಕಾಯಿಲೆಗಳು ನಿಮಿರು ದೌರ್ಬಲ್ಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪಿತ್ತಜನಕಾಂಗದ ಕಾಯಿಲೆಗಳಲ್ಲಿ ಈಸ್ಟ್ರೊಜೆನ್ ಹಾರ್ಮೋನುಗಳ ಮಟ್ಟವು ಹೆಚ್ಚಾಗುತ್ತದೆ. ಈಸ್ಟ್ರೊಜೆನ್ ಹಾರ್ಮೋನುಗಳ ಹೆಚ್ಚಿದ ಮಟ್ಟವು ನಿಮಿರುದೌರ್ಬಲ್ಯಕ್ಕೆ ಕಾರಣವಾಗುತ್ತದೆ.
ಆದರೆ ಯಾವುದೇ ಆಯುರ್ವೇದ ಮನೆಮದ್ದುಗಳನ್ನು ಪ್ರಯತ್ನಿಸುವ ಮೊದಲು, ಅರ್ಹ ವೈದ್ಯರನ್ನು ಸಂಪರ್ಕಿಸಿ.
ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ
+91 9945995660 / +91 9448433911 ಗೆ ಕರೆ ಮಾಡಿ
ವಾಟ್ಸ್ ಅಪ್ + 91 6360108663