ಅಶ್ವಗಂಧ ಕ್ಷೀರಪಾಕ – ಮೂನ್ ಮಿಲ್ಕ್ ಅಥವಾ ಅಶ್ವಗಂಧ ಹಾಲಿನ ಪ್ರಯೋಜನಗಳು


ನಿಮಿರು ದೌರ್ಬಲ್ಯ ಹಾಗು ಶೀಘ್ರ ಸ್ಖಲನ ದಿಂದ ಬಳಲುತ್ತಿರುವ ಪುರುಷರಿಗೆ ಹಾಲಿನೊಂದಿಗೆ ಅಶ್ವಗಂಧದ ಬೇರಿನ ಪುಡಿಯನ್ನು ಕುಡಿಸಿ ಉಪಯೋಗಿಸಿದಾಗ ಬಹಳಷ್ಟು ಲಾಭವಾಗುತ್ತದೆ . ಅಶ್ವಗಂಧದ ಪುಡಿಯನ್ನು  ಹಾಲಿನೊಂದಿಗೆ  ಬಳಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ .

ಹೆಚ್ಚಿನ ಮಾಹಿತಿ:-

  1. ಅಶ್ವಗಂಧ ಕ್ಯಾಪ್ಸುಲ್ ಅಥವಾ ಗುಳಿಗೆಗಳ ಉಪಯೋಗಗಳು

ಅಶ್ವಗಂಧ ಬೇರುಗಳ ಬಗ್ಗೆ

ಆಯುರ್ವೇದದ ಪಠ್ಯಗಳು ಪುರುಷರ ಲೈಂಗಿಕ ಕ್ರಿಯೆಯನ್ನು ಹೆಚ್ಚಿಸಲು ವಿವಿಧ ಪಾಕವಿಧಾನಗಳನ್ನು ಶಿಫಾರಸು ಮಾಡುತ್ತವೆ. ಇವುಗಳಲ್ಲಿ, ಕಾಮೋತ್ತೇಜಕ ಗಿಡಮೂಲಿಕೆಗಳನ್ನು ಬಳಸಿ ತಯಾರಿಸುವ ಹಾಲಿನ ಪಾಕ ವಿಧಾನಗಳು ಬಹಳ ಜನಪ್ರಿಯವಾಗಿವೆ. ನಿಮಿರು ದೌರ್ಬಲ್ಯ ಹಾಗು ಶೀಘ್ರ ಸ್ಖಲನದಿಂದ  ಬಳಲುತ್ತಿರುವ ಪುರುಷರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪಾಕವಿಧಾನ ಇಲ್ಲಿದೆ. ಈ ಪಾಕವಿಧಾನದಲ್ಲಿ ಉಪಯೋಗಿಸಲ್ಪಡುವ ಪದಾರ್ಥಗಳು ದೇಹ ಹಾಗು ಸಂತಾನೋತ್ಪತ್ತಿಯ  ವ್ಯವಸ್ಥೆಯನ್ನು ಪೋಷಿಸುವ ಜೊತೆಗೆ ಡಯಾಬಿಟಿಸ್ ಅಥವಾ ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ  ನಿಯಂತ್ರಿಸಲು ಸಹಾಯ ಮಾಡುತ್ತದೆ.

ಆಯುರ್ವೇದದ ಪಠ್ಯಗಳು ಅಶ್ವಗಂಧ ಬೇರುಗಳ ಕಾಮೋತ್ತೇಜಕ ಗುಣಗಳನ್ನು ಶ್ಲಾಘಿಸುತ್ತವೆ. “ಕಂದೋ ವಾಜಿಕರಃ ಸ್ಮೃತಃ”- ಅಶ್ವಗಂಧದ ಬೇರುಗಳು ವಾಜಿಕರ ಅಥವಾ ಕಾಮೋತ್ತೇಜಕವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಲಾಗುತ್ತದೆ. ಅಶ್ವಗಂಧದ ಬೇರುಗಳನ್ನು ಒಳಗೊಂಡಿರುವ ಆಹಾರ ತಯಾರಿಕೆಗಳು ಯಾವಾಗಲೂ ನಿಮಿರು ದೌರ್ಬಲ್ಯಕ್ಕೆ  ಅತ್ಯುತ್ತಮ ಆಹಾರವಾಗಿ ಕಾರ್ಯನಿರ್ವಹಿಸುತ್ತವೆ. ಇದು ನೈಸರ್ಗಿಕವಾಗಿ ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸುತ್ತದೆ. ಆಯುರ್ವೇದ ಆಚಾರ್ಯರು ಸ್ವಾಭಾವಿಕವಾಗಿ ಪುರುಷರಲ್ಲಿ ಕಾಮವನ್ನು ಹೆಚ್ಚಿಸಲು ಅಶ್ವಗಂಧದ  ಅನೇಕ  ರೀತಿಯ ಪಾಕ ವಿಧಾನಗಳನ್ನು  ವಿವರಿಸಿದ್ದಾರೆ. ಅಶ್ವಗಂಧದ ಬೇರಿನ ಪುಡಿಯನ್ನು ಉಪಯೋಗಿಸಿಕೊಂಡು ಅಶ್ವಗಂಧದ  ಹಾಲನ್ನು ತಯಾರಿಸಬಹುದು .  ಅಶ್ವಗಂಧದ ಹಾಲನ್ನು ಮೂನ್ ಮಿಲ್ಕ್  ಅಥವಾ ಅಶ್ವಗಂಧ ಕ್ಷೀರ ಪಾಕ ಎಂದೂ ಕರೆಯುತ್ತಾರೆ .

ಅಶ್ವಗಂಧ  ಹಾಲನ್ನು  ತಯಾರಿಸುವ ವಿಧಾನ

ಅಶ್ವಗಂಧ ಹಾಲಿನ ರುಚಿಯಾದ ಪಾಕವಿಧಾನ ಇಲ್ಲಿದೆ. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು:

  1. ಹಾಲು – 150 ಮಿಲಿ
  2. ನೀರು – 100 ಮಿಲಿ
  3. ಅಶ್ವಗಂಧ ಬೇರಿನ ಪುಡಿ – 1 ಟೀ ಚಮಚ
  4. ಬಾದಾಮಿ – 10
  5. ವಾಲ್ ನಟ್  – 10
  6. ತುಪ್ಪ – ½ ಟೀ ಚಮಚ
  7. ಏಲಕ್ಕಿ – 1 ಚಿಟಿಕೆ

ಅಶ್ವಗಂಧ ಹಾಲು ತಯಾರಿಕೆ:

ಬಾದಾಮಿ ಮತ್ತು ವಾಲ್‌ನಟ್‌ಗಳನ್ನು ಚಿನ್ನದ ಬಣ್ಣ ಬರುವವರೆಗೆ  ತುಪ್ಪದಲ್ಲಿ ಹುರಿಯಿರಿ ಮತ್ತು ಅವುಗಳನ್ನು ತಣ್ಣಗಾಗಲು ಬಿಡಿ. ಈ ಬೀಜಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ . ಹಾಲಿಗೆ ನೀರು ಮತ್ತು ಅಶ್ವಗಂಧ ಪುಡಿ ಸೇರಿಸಿ. ಹಾಲಿನ ಭಾಗ ಮಾತ್ರ ಉಳಿಯುವವರೆಗೆ ಇದನ್ನು ಕುದಿಸಿ. ನಂತರ ರುಬ್ಬಿದ ಬೀಜಗಳು ಹಾಗು ಏಲಕ್ಕಿ ಸೇರಿಸಿ ಒಂದು ಕುದಿ ಕುದಿಸಿ ಮತ್ತು ಗ್ಯಾಸ್ ಉರಿಯನ್ನು ಆಫ್ ಮಾಡಿ. ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಈ ಹಾಲನ್ನು ದಿನಕ್ಕೆ ಎರಡು ಬಾರಿ ಸೇವಿಸಿ.

ಅಶ್ವಗಂಧ  ಹಾಲು ಅಥವಾ ಮೂನ್ ಮಿಲ್ಕ್  ಪ್ರಯೋಜನಗಳು

  1. ಇದು ಜ್ಞಾಪಕ ಶಕ್ತಿ ಹಾಗು ಏಕಾಗ್ರತೆಯನ್ನು ಸುಧಾರಿಸುತ್ತದೆ.
  2. ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
  3. ಒಳ್ಳೆಯ ನಿದ್ರೆಯನ್ನು ಉಂಟುಮಾಡುತ್ತದೆ.
  4. ರೋಗನಿರೋಧಕ ಶಕ್ತಿ ಮತ್ತು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗು ದೇಹವನ್ನು ಬಲಪಡಿಸುತ್ತದೆ.
  5. ಕೀಲು ನೋವನ್ನು ಕಡಿಮೆ ಮಾಡುತ್ತದೆ.
  6. ಸಂಧಿವಾತ ಅಥವಾ ಅಮವಾತದಲ್ಲಿ ಪರಿಣಾಮಕಾರಿ.
  7. ಹಸಿವನ್ನು ಹೆಚ್ಚಿಸುತ್ತದೆ, ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.
  8. ಕಾಮವನ್ನು ಹೆಚ್ಚಿಸುತ್ತದೆ, ನಿಮಿರು ದೌರ್ಬಲ್ಯವನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.
  9. ವೀರ್ಯಾಣುಗಳ ಸಂಖ್ಯೆ ಹಾಗು ಅವುಗಳ ಚಲನಶೀಲತೆಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿರುತ್ತದೆ
  10. ಸ್ತ್ರೀಯರಲ್ಲಿ  ಕಾಮವನ್ನು ಹೆಚ್ಚಿಸುತ್ತದೆ.
  11. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
  12.  ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.
  13. ಮುಪ್ಪಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ದೇಹವನ್ನು ಪುನರ್ಯೌವನಗೊಳಿಸುತ್ತದೆ.
  14.  ಆಯುರ್ವೇದ ಆಚಾರ್ಯರು ವೃದ್ಧಾಪ್ಯದಲ್ಲಿ ಇದನ್ನು ಹೆಚ್ಚಾಗಿ  ಬಳಸುವಂತೆ ಉಪದೇಶಿಸಿರುತ್ತಾರೆ .

ಅಶ್ವಗಂಧ ಹಾಲಿನಲ್ಲಿರುವ ಪದಾರ್ಥಗಳ ಪ್ರಯೋಜನಗಳು

ಹಾಲು

ಇದರ ಮೂಲ ಘಟಕಾಂಶವೆಂದರೆ ಹಾಲು. ಹಾಲಿನ ಗುಣಗಳನ್ನು ಆಯುರ್ವೇದ ಆಚಾರ್ಯರು ಈ ಕೆಳಗಿನಂತೆ ಹೊಗಳಿದ್ದಾರೆ:

ಹಾಲು ಆರೋಗ್ಯಕರ ದೀರ್ಘ ಜೀವನವನ್ನು ಆನಂದಿಸಲು ಸಹಾಯ ಮಾಡುತ್ತದೆ. ಇದು ಪುನರುಜ್ಜೀವನಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ತ್ರಾಣವನ್ನು ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಲು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಇದು ಬಾಯಾರಿಕೆ, ಹಸಿವು ನೀಗಿಸುತ್ತದೆ ಮತ್ತು ಮೂತ್ರ ವಿಸರ್ಜನೆಯನ್ನು ಸರಾಗಗೊಳಿಸುತ್ತದೆ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.

ಅಶ್ವಗಂಧ

ಈ ಪಾಕವಿಧಾನದಲ್ಲಿನ ಮುಂದಿನ ಗಿಡಮೂಲಿಕೆ  ಅಶ್ವಗಂಧ. ಆಯುರ್ವೇದ ಪಠ್ಯ “ಭಾವಪ್ರಕಾಶ”,  ಅಶ್ವಗಂಧದ ಆರೋಗ್ಯ ಪ್ರಯೋಜನಗಳು ಮತ್ತು ಉಪಯೋಗಗಳನ್ನು ಈ ಕೆಳಗಿನಂತೆ ವಿವರಿಸುತ್ತದೆ.

ಅಶ್ವಗಂಧ ವಾತ ದೋಷ ಮತ್ತು ಕಫ ದೋಷವನ್ನು ನಿವಾರಿಸುತ್ತದೆ. ಇದು ದೇಹದ ಶಕ್ತಿ ಹಾಗು ಲೈಂಗಿಕ ಶಕ್ತಿಯನ್ನು  ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ . ಈ ಮೂಲಿಕೆಯ ನಿರಂತರ ಬಳಕೆಯಿಂದ  ವೀರ್ಯದ ಗುಣಮಟ್ಟ ಮತ್ತು ಪ್ರಮಾಣವನ್ನು ಸುಧಾರಿಸುತ್ತದೆ. ಇದರರ್ಥ ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯಾಣು ಚಲನಶೀಲತೆಯನ್ನು ಸುಧಾರಿಸುತ್ತದೆ. ಅಶ್ವಗಂಧವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಸಸ್ಯವು ನಿದ್ರೆಯನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ಪುನರ್ಯೌವನಗೊಳಿಸುತ್ತದೆ. ಈ ಸಸ್ಯವು ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ಬಾದಾಮಿ

ಬಾದಾಮಿಯನ್ನು ಅದರ ಔಷಧೀಯ ಗುಣಗಳನ್ನು ಹೆಚ್ಚಿಸಲು ಈ ಪಾಕವಿಧಾನಕ್ಕೆ ಸೇರಿಸಲಾಗುತ್ತದೆ. ಬಾದಾಮಿ ಪ್ರೋಟೀನ್ಗಳು, ಜೀವಸತ್ವಗಳು ಮತ್ತು ಖನಿಜಗಳ ಆಗರವಾಗಿದೆ . ಇದು ದೇಹಕ್ಕೆ ಬೇಕಾದ  ವಿಟಮಿನ್ ಇ ಮತ್ತು ಮ್ಯಾಂಗನೀಸ್ ಅಂಶಗಳನ್ನು ಪೂರೈಸುತ್ತದೆ . ಬಾದಾಮಿಯು, ವಿಶೇಷವಾಗಿ ಮಧುಮೇಹ ಇರುವವರಿಗೆ ಒಳ್ಳೆಯದು. ಬಾದಾಮಿಯು ಊಟದ ನಂತರ ಗ್ಲೂಕೋಸ್ (ರಕ್ತದ ಸಕ್ಕರೆ) ಮತ್ತು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ. ನಿಮಿರು ದೌರ್ಬಲ್ಯದಿಂದ ಬಳಲುತ್ತಿರುವ ಮಧುಮೇಹಿ ಪುರುಷರಿಗೆ, ಪ್ರಕೃತಿ ಚಿಕಿತ್ಸಕರು ಬಾದಾಮಿಯನ್ನು ಶಿಫಾರಸು ಮಾಡುತ್ತಾರೆ.

ಆಕ್ರೋಟ್ ಅಥವಾ ವಾಲ್ ನಟ್  ಪ್ರಯೋಜನಗಳು

ಈ ಪಾಕವಿಧಾನಕ್ಕೆ ವಾಲ್‌ನಟ್ಸ್ ಅನ್ನು ಸೇರಿಸಲು ನಮ್ಮ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಈ ಬೀಜಗಳಲ್ಲಿನ ಕೊಬ್ಬು ಮಧುಮೇಹಿಗಳಲ್ಲಿ , ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಾಲ್‌ನಟ್ಸ್‌ನಲ್ಲಿ ಹೆಚ್ಚಿನ ಪ್ರಮಾಣದ ತಾಮ್ರ, ಮ್ಯಾಂಗನೀಸ್, ಮಾಲಿಬ್ಡಿನಮ್ ಮತ್ತು ಬಯೋಟಿನ್ ಜೊತೆಗೆ ಅಮೈನೋ ಆಮ್ಲ ಎಲ್-ಅರ್ಜಿನೈನ್, ಒಮೆಗಾ-3 ಕೊಬ್ಬುಗಳಿವೆ. ವಾಲ್‌ನಟ್ಸ್‌ನಲ್ಲಿರುವ ಪೋಷಕಾಂಶಗಳು ಪುರುಷರ  ಸಂತಾನೋತ್ಪತ್ತಿ ವ್ಯವಸ್ಥೆಗೆ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ನಿಮಿರು ದೌರ್ಬಲ್ಯವನ್ನು ನಿವಾರಿಸಲು ಸಹಾಯ ಮಾಡುತ್ತದೆ .

ಲೇಖಕಿ : ಡಾ ।।ಸವಿತಾ ಸೂರಿ

Free Ayurvedic Consultation

Call us at +91 9945995660 / +91 9448433911

Whats App + 91 6360108663/


2 thoughts on “ಅಶ್ವಗಂಧ ಕ್ಷೀರಪಾಕ – ಮೂನ್ ಮಿಲ್ಕ್ ಅಥವಾ ಅಶ್ವಗಂಧ ಹಾಲಿನ ಪ್ರಯೋಜನಗಳು”

  1. Pingback: ಅಶ್ವಗಂಧ ಕ್ಯಾಪ್ಸುಲ್ ಅಥವಾ ಗುಳಿಗೆಗಳ ಉಪಯೋಗಗಳು - Ayurveda Remedies, Tips and Treatment

  2. Pingback: Ashwagandha Ksheerapaka – Moon Milk or Ashwagandha Milk Benefits

Comments are closed.

Chat with us!
Need help?
Hello!
How can we help you?