ದುರ್ವಾ ಅಥವಾ ಗರಿಕೆ ಹುಲ್ಲನ್ನು ಮುಖ್ಯವಾಗಿ ಸ್ತ್ರೀ ಬಂಜೆತನ, ಯುಟಿಐ (ಉರಿ ಮೂತ್ರ ), ಸಿಸ್ಟೈಟಿಸ್ (ಮೂತ್ರಕೋಶದ ಉರಿಯೂತ ), ಪಿ ಸಿ ಓ ಎಸ್ , ಸೋರಿಯಾಸಿಸ್, ಚರ್ಮ ರೋಗಗಳು, ಅಸಿಡಿಟಿ , ಹರ್ಪಿಸ್ (ಸರ್ಪಸುತ್ತು) ಮತ್ತು ಪಿತ್ತದ ಅಸಮತೋಲನದಲ್ಲಿ ಬಳಸಲಾಗುತ್ತದೆ.
ವಿಷಯದ ಕೋಷ್ಟಕ ( Read this article in English Ayurveda Health Benefits of Durva Grass- Cynodon Dactylon)
ದುರ್ವಾ ಹುಲ್ಲು ಅಥವಾ ಗರಿಕೆ ಹುಲ್ಲು ಬಗ್ಗೆ
ದುರ್ವಾ ಹುಲ್ಲಿನ ಉಪಯೋಗಗಳು ಮತ್ತು ಆಯುರ್ವೇದ ಆರೋಗ್ಯ ಪ್ರಯೋಜನಗಳು
ಹಿಂದೂ ಪುರಾಣದಲ್ಲಿ ದುರ್ವಾ ಅಥವಾ ಗರಿಕೆ ಹುಲ್ಲು
ದುರ್ವಾ ಹುಲ್ಲು ಅಥವಾ ಗರಿಕೆ ಹುಲ್ಲು ಬೆಳಸುವ ಬಗ್ಗೆ
ದುರ್ವಾ ಹುಲ್ಲನ್ನು ಬಹಾಮಾ ಹುಲ್ಲು, ಬರ್ಮುಡಾ ಹುಲ್ಲು, ದೆವ್ವದ ಹುಲ್ಲು ಅಥವಾ ಕೌಚ್ ಹುಲ್ಲು ಎಂದೂ ಕರೆಯುತ್ತಾರೆ. ಇದು ಗ್ರಾಮಿನೇ ಕುಟುಂಬಕ್ಕೆ ಸೇರಿದ್ದು, ಇದನ್ನು ಭಾರತದಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.
ಸಂಸ್ಕೃತ – ಶತಪರ್ವ, ದುರ್ವಾ
ಸಸ್ಯಶಾಸ್ತ್ರೀಯ ಹೆಸರು-ಸೈನೋಡಾನ್ ಡ್ಯಾಕ್ಟಿಲಾನ್
ಹಿಂದಿ – ಡೂಬ್
ಬಂಗಾಳಿ – ದುರ್ಬಾ
ಪಂಜಾಬಿ- ದುಬ್ದಾ
ಮರಾಠಿ – ಹರಾಲಿ
ಗುಜರಾತಿ – ಧ್ರೋ
ತಮಿಳು – ಅರುಗಂ
ತೆಲ್ಗು – ಗೋರಿಯಾ ಗಡ್ಡಿ
ಕನ್ನಡ – ಗರಿಕೆ ಹುಲ್ಲು
ಇಂಗ್ಲಿಷ್ – ಬಹಮಾ ಹುಲ್ಲು, ಬರ್ಮುಡಾ ಹುಲ್ಲು, ದೆವ್ವದ ಹುಲ್ಲು ಅಥವಾ ಕೌಚ್ ಹುಲ್ಲು
ಇದು ನೆಲದ ಮೇಲೆ ಹರಡುವ ಸಣ್ಣ ಸಸ್ಯವಾಗಿದೆ. ಇದು ಕಾರ್ಪೆಟ್ನಂತೆ ನೆಲವನ್ನು ಆವರಿಸುತ್ತದೆ. ಭಾರತದಲ್ಲಿ ದುರ್ವಾವನ್ನು ಹಿಂದೂ ದೇವರುಗಳನ್ನು , ಅದರಲ್ಲೂ ವಿಶೇಷವಾಗಿ ಗಣೇಶನನ್ನು ಪೂಜಿಸಲು ಬಳಸಲಾಗುತ್ತದೆ.
ಗರಿಕೆ ಹುಲ್ಲಿನ ಆಯುರ್ವೇದ ಆರೋಗ್ಯ ಪ್ರಯೋಜನಗಳು (ಸೈನೋಡಾನ್ ಡ್ಯಾಕ್ಟಿಲಾನ್‌ನ) ಮತ್ತು ಉಪಯೋಗಗಳು
ಆಯುರ್ವೇದದ ಪಠ್ಯಗಳು ದುರ್ವಾ ಹುಲ್ಲಿನ ಔಷಧೀಯ ಗುಣಗಳನ್ನು ಈ ಕೆಳಗಿನಂತೆ ವಿವರಿಸುತ್ತದೆ
ಇದು ಮೂರು ರೀತಿಯ ರುಚಿ ಹೊಂದಿದೆ ಸಿಹಿ ( ಮಧುರಾ ರಸ ) , ಒಗರು ( Kashaya ರಸ ) ಮತ್ತು ಕಹಿ ( tikta ರಸ ) . ಗರಿಕೆ ಪಿತ್ತ , ಕಫ ದೋಷಗಳನ್ನು ಸಮತೋಲನ ಮಾಡಿ ರಕ್ತವನ್ನು ಶುದ್ಧಿ ಮಾಡುತ್ತದೆ . ಅಲ್ಲದೆ ಇದು ದೇಹದ ಉಷ್ಣವನ್ನು ಕಡಿಮೆ ಮಾಡಿ ಉತ್ತಮ ಶೀತಕವಾಗಿ ಕಾರ್ಯ ನಿರ್ವಹಿಸುತ್ತದೆ .
ಸೋರಿಯಾಸಿಸ್ ನಲ್ಲಿ ದುರ್ವಾ ಹುಲ್ಲು ಅಥವಾ ಬರ್ಮುಡಾ ಹುಲ್ಲಿನ ಬಳಕೆ
ಆಯುರ್ವೇದ ಆಚಾರ್ಯರು ಈ ಹುಲ್ಲನ್ನು ಚರ್ಮ ಸ್ನೇಹಿ ಗಿಡಮೂಲಿಕೆಗಳ ಅಡಿಯಲ್ಲಿ ವರ್ಗೀಕರಿಸಿದ್ದಾರೆ. ಇದು ಗಾಯವನ್ನು ವೇಗವಾಗಿ ಮಾಯಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮದ ನೈಸರ್ಗಿಕ ಬಣ್ಣವನ್ನು ಪುನಃಸ್ಥಾಪಿಸುತ್ತದೆ. ಸೋರಿಯಾಸಿಸ್ , ಹರ್ಪಿಸ್ , ಗುಣಪಡಿಸದ ಗಾಯಗಳು, ಅಲರ್ಜಿ ದದ್ದುಗಳು ಮತ್ತು ಮೂಲವ್ಯಾಧಿಗಳಲ್ಲಿ ಈ ಹುಲ್ಲಿನ ಬಳಕೆಯನ್ನು ಶಿಫಾರಸು ಮಾಡಲಾಗಿದೆ . ಆದ್ದರಿಂದ ಈ ಸಸ್ಯವನ್ನು ಅನೇಕ ಚರ್ಮದ ಕ್ರೀಮ್‌ಗಳು ಮತ್ತು ಸೋರಿಯಾಸಿಸ್ ಕ್ರೀಮ್‌ಗಳಲ್ಲಿ ಒಂದು ಘಟಕಾಂಶವಾಗಿ ಸೇರಿಸಲಾಗುತ್ತದೆ . ಈ ಮೂಲಿಕೆ ತುರಿಕೆ ಕಡಿಮೆ ಮಾಡುತ್ತದೆ, ನೆತ್ತಿಯ ಚರ್ಮವನ್ನು ಗುಣಪಡಿಸುತ್ತದೆ ಮತ್ತು ಚರ್ಮಕ್ಕೆ ಸಾಮಾನ್ಯ ಬಣ್ಣವನ್ನು ನೀಡುತ್ತದೆ.
ಪಿಸಿಓಎಸ್ ಅಥವಾ ಪಿ ಸಿ ಓ ಡಿ ಮತ್ತು ಬಂಜೆತನಕ್ಕೆ ಗರಿಕೆ ಹುಲ್ಲು ಅಥವಾ ಬರ್ಮುಡಾ ಹುಲ್ಲು
ಆಯುರ್ವೇದ ವೈದ್ಯರು , ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವ ಇದ್ದಾಗ , ಅನಿಯಮಿತ ಮುಟ್ಟಿನ ಚಕ್ರ ಮತ್ತು ಪುನರಾವರ್ತಿತ ಗರ್ಭಪಾತ ಇಂತಹ ಪರಿಸ್ಥಿತಿಗಳಲ್ಲಿ ಇದನ್ನು ಶಿಫಾರಸು ಮಾಡುತ್ತಾರೆ. ಈ ಮೂಲಿಕೆ ಪಿಸಿಓಎಸ್ ವಿರುದ್ಧ ಹೋರಾಡಲು ಸಹ ಸಹಾಯ ಮಾಡುತ್ತದೆ (ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್) . ಇದು ಗರ್ಭಪಾತವನ್ನು ತಡೆಯುತ್ತದೆ ಮತ್ತು ಗರ್ಭಾಶಯವನ್ನು ಬಲಪಡಿಸುತ್ತದೆ. ಪಿಸಿಓಎಸ್‌ಗೆ ( PCOS/PCOD) ಇದು ಅತ್ಯುತ್ತಮ ಭಾರತೀಯ ಆಯುರ್ವೇದ ಮನೆ ಮದ್ದು
ಸಿಸ್ಟೈಟಿಸ್ (ಮೂತ್ರಕೋಶದ ಉರಿಯೂತ) ಮತ್ತು ಮೂತ್ರದ ಸೋಂಕಿನಲ್ಲಿ (ಯುಟಿಐ) ದುರ್ವಾ ಹುಲ್ಲಿನ ಬಳಕೆ
ಈ ಹುಲ್ಲು ಶೀತಲ ಗುಣಗಳನ್ನು ಹೊಂದಿದೆ. ಇದು ಮೂತ್ರದ ಉತ್ಪತ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮೂತ್ರಕೋಶದ ಒಳ ಪದರಗಳನ್ನು ಶಮನಗೊಳಿಸುತ್ತದೆ. ಸಿಸ್ಟೈಟಿಸ್ ಮತ್ತು ಯುಟಿಐನಲ್ಲಿ ( Cystitis and UTI ) ಮ್ಯೂಕೋಸಲ್ ಪದರದ ಉರಿಯೂತವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ .
ಜೀರ್ಣಕಾರಿ ಕಾಯಿಲೆಗಳಿಗೆ ಗರಿಕೆ ಹುಲ್ಲು
ಆಯುರ್ವೇದ ಆಚಾರ್ಯರು ಜೀರ್ಣಾಂಗದ ಕಾಯಿಲೆಗಳಾದ ವಾಂತಿ, ಅಧಿಕ ಬಾಯಾರಿಕೆ, ಅತಿಸಾರ, ಭೇದಿ, ಅಜೀರ್ಣ ಮೂಲವ್ಯಾಧಿ ಇತ್ಯಾದಿಗಳಲ್ಲಿ ಈ ಸಸ್ಯವನ್ನು ಶಿಫಾರಸು ಮಾಡುತ್ತಾರೆ .
ಗರಿಕೆಯ ಮನೆಮದ್ದು:
- ದುರ್ವಾ ಹುಲ್ಲಿನ ಕೆಲವು ಎಳೆಗಳನ್ನು ತೆಗೆದುಕೊಂಡು ಅವುಗಳನ್ನು ಶುದ್ಧ ನೀರಿನಿಂದ ತೊಳೆಯಿರಿ. ಕೆಲವು ಹನಿ ನೀರನ್ನು ಸೇರಿಸುವ ಮೂಲಕ ಉತ್ತಮವಾದ ಪೇಸ್ಟ್ ಮಾಡಿ. ರಕ್ತಸ್ರಾವವನ್ನು ನಿಲ್ಲಿಸಲು ಮತ್ತು ಗಾಯವನ್ನು ತ್ವರಿತವಾಗಿ ಮಾಯಿಸಲು, ರಕ್ತಸ್ರಾವದ ಗಾಯಗಳಿಗೆ ಈ ಪೇಸ್ಟ್ ಅನ್ನು ಹಚ್ಚಿರಿ .
- ಮೇಲೆ ಹೇಳಿದಂತೆ ಪೇಸ್ಟ್ ತಯಾರಿಸಿ ೧ ಲೋಟ ನೀರಿನೊಂದಿಗೆ ಬೆರೆಸಿ. ದೇಹದ ಶಕ್ತಿಯನ್ನು ಹೆಚ್ಚಿಸಲು , ದೇಹದ ಪ್ರತಿರೋಧಕ ಶಕ್ತಿ ಬಲ ಪಡಿಸಲು ಮತ್ತು ದೇಹವನ್ನು ಪುನರ್ಯೌವನಗೊಳಿಸಲು ಇದನ್ನು ಪ್ರತಿದಿನ ಸೇವಿಸಿ.
- ಮೂಗಿನ ಮೂಲಕ ರಕ್ತಸ್ರಾವವಾದರೆ 2-3 ಹನಿ ಗರಿಕೆ ಹುಲ್ಲಿನ ರಸವನ್ನು ಮೂಗಿನ ಹೊಳ್ಳೆಗಳಿಗೆ ಹಾಕಿ .
- ಈ ಹುಲ್ಲಿನ ರಸವು ಗರ್ಭವನ್ನು ರಕ್ಷಿಸಲು ಮತ್ತು ಗರ್ಭಿಣಿ ಮಹಿಳೆಯರಲ್ಲಿ ರಕ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಗರಿಕೆ ಹುಲ್ಲಿನ ಆಯುರ್ವೇದ ಫೇಸ್ ಪ್ಯಾಕ್ ಹೀಗೆ ತಯಾರಿಸಬಹುದು . ಅಕ್ಕಿ ಹಿಟ್ಟು ಮತ್ತು ಈ ಹುಲ್ಲಿನ ರಸವನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ, ಚರ್ಮದ ಉರಿ ಹಾಗು ಕೆರಳಿಕೆ ಕಡಿಮೆಯಾಗುತ್ತದೆ . ಹೀಟ್ ಸ್ಟ್ರೋಕ್‌ಗೂ ಇದು ಸಹಕಾರಿಯಾಗಿದೆ.
- ದುರ್ವಾ ರಸ + ಅಕ್ಕಿ ನೀರು + ಸಕ್ಕರೆ, ಈ ಮಿಶ್ರಣ ವಾಕರಿಕೆ, ವಾಂತಿ ಮತ್ತು ಅತಿಯಾದ ಬಾಯಾರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹಿಂದೂ ಪುರಾಣದಲ್ಲಿ ದುರ್ವಾ ಹುಲ್ಲು-
ದುರ್ವಾ ಹುಲ್ಲನ್ನು ಹಿಂದೂಗಳಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಹುಲ್ಲಿನ 21 ಕೋಮಲ ಗರಿಕೆಗಳನ್ನು ಗಣೇಶನಿಗೆ ಅರ್ಪಿಸಲಾಗುತ್ತದೆ. ಆಯುರ್ವೇದದ ಪ್ರಕಾರ ದುರ್ವಾ ಹುಲ್ಲು ದೇಹದ ಶೀತಕವಾಗಿ ಕಾರ್ಯನಿರ್ವಹಿಸುತ್ತದೆ. ಒಮ್ಮೆ ಗಣೇಶನು ಭೂಮಿಯನ್ನು ನಾಶಪಡಿಸುತ್ತಿದ್ದ , ಬೆಂಕಿಯನ್ನು ಹೊರಚೆಲ್ಲುವ ರಾಕ್ಷಸನಾದ ಅನಲಾಸುರನನ್ನು ನುಂಗಿದನು . ಇದರಿಂದ ಗಣಪತಿ ತನ್ನ ದೇಹ ಮತ್ತು ಹೊಟ್ಟೆಯಲ್ಲಿ ಬೆಂಕಿ ಸುಡುವ ಸಂವೇದನೆಯನ್ನು ಅನುಭವಿಸಲು ಪ್ರಾರಂಭಿಸಿದ. ಯಾವುದೇ ಔಷಧಿಗಳಿಗೆ ಈ ಸಮಸ್ಯೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ. ನಂತರ ಅವನಿಗೆ ಗರಿಕೆ ಹುಲ್ಲು ತಿನ್ನಲು ನೀಡಲಾಯಿತು ಮತ್ತು ಗರಿಕೆ ಅರೆದು ಅದನ್ನು ಅವನ ದೇಹದಾದ್ಯಂತ ಹಚ್ಚಲಾಯಿತು. ಈ ಚಿಕಿತ್ಸೆಯ ನಂತರ ಗಣೇಶನಿಗೆ ಸುಡುವ ಸಂವೇದನೆ ಹಾಗು ಉರಿ ಕಡಿಮೆಯಾಯಿತು.
ದುರ್ವಾ ಹುಲ್ಲನ್ನು ಹೇಗೆ ಗುರುತಿಸುವುದು ಮತ್ತು ಬೆಳೆಸುವುದು ?
ದುರ್ವಾ ತೆಳುವಾದ ಉದ್ದದ ಎಲೆ ಹೊಂದಿರುವ ದೀರ್ಘಕಾಲಿಕ ಹುಲ್ಲು. ಇದು ದಪ್ಪ ಚಾಪೆಯಂತೆ ನೆಲವನ್ನು ಆವರಿಸುತ್ತದೆ. ಇದನ್ನು ಕಳೆ ಎಂದು ಪರಿಗಣಿಸಲಾಗುತ್ತದೆ. ಆದರೆ ಆಯುರ್ವೇದದಲ್ಲಿ ಈ ಸಸ್ಯದ ಎಲ್ಲಾ ಭಾಗಗಳನ್ನು ಔಷಧೀಯ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಇದನ್ನು ಮನೆಯ ತೋಟದಲ್ಲಿ , ಕುಂಡಗಳಲ್ಲಿ ಸುಲಭವಾಗಿ ಬೆಳೆಸಬಹುದು ಮತ್ತು ಇದನ್ನು ಬೆಳೆಯಲು ನಿಯಮಿತ ಆರೈಕೆ ಸಾಕು.
ದೇಹದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ದುರ್ವಾ ಹುಲ್ಲನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಇದು ಸುಲಭವಾಗಿ ಲಭ್ಯವಿದೆ ಮತ್ತು ಅನೇಕ ರೋಗಗಳಿಗೆ ಮತ್ತು ಶಕ್ತಿಯ ವರ್ಧನೆಗೆ ಮನೆಮದ್ದಾಗಿ ಇದನ್ನು ಉಪಯೋಗಿಸಬಹುದು . ಈ ಹುಲ್ಲಿನ ನಿಯಮಿತ ಸೇವನೆಯು ದೇಹಕ್ಕೆ ಒಳ್ಳೆಯದು.
ಲೇಖಕಿ : ಡಾ ।।ಸವಿತಾ ಸೂರಿ
Call us at +91 9945995660 / +91 9448433911
Whats App + 91 6360108663/