ಮನುಷ್ಯನು ಆರೋಗ್ಯವಾಗಿರಬೇಕಾದರೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರಿಸಬೇಕು . ನಿದ್ರಾಹೀನತೆಯು ದೇಹದ ಶಕ್ತಿಗುಂದಿಸಿ, ಮನಸ್ಸನ್ನು ಅಸಂತುಲಿತಗೊಳಿಸುತ್ತದೆ . ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಿ , ಲೈಂಗಿಕವಾಗಿಯೂ ಬಲಹೀನನನ್ನಾಗಿಸುತ್ತದೆ . ಸುಖ ನಿದ್ರೆಗಾಗಿ ಆಯುರ್ವೇದದಲ್ಲಿ ಅನೇಕ ಚಿಕಿತ್ಸೆಗಳನ್ನು ಉಲ್ಲೇಖಿಸಿದ್ದಾರೆ .
Read this article in English Ayurvedic Remedies, Medicines and Tips for Good Sleep
ವಿಷಯ ಸೂಚಿ
ನಿದ್ರಾಹೀನತೆ ಎಂದರೇನು ? (insomnia meaning in kannada)
ಸುಖವಾದ ನಿದ್ರೆಯ ಲಾಭದಾಯಕ ಪರಿಣಾಮಗಳು.
ನಿದ್ರಾಹೀನತೆಗೆ ಆಯುರ್ವೇದ ಚಿಕಿತ್ಸೆಗಳು (sleeping tips kannada)
ನಿದ್ರಾಹೀನತೆ ಎಂದರೇನು ? (insomnia meaning in kannada)
ನಿದ್ರಾಹೀನತೆ ಗೆ ಇಂಗ್ಲೀಷ್ ನಲ್ಲಿ ಇನ್ಸೋಮ್ನಿಯಾ (insomnia) ಎನ್ನುತ್ತಾರೆ . ನಿದ್ರಾಹೀನತೆ ಎಂದರೆ ಸುಖವಾಗಿ ನಿದ್ರೆ ಮಾಡುವುದಕ್ಕೆ ಆಗದಿರುವುದು. ಕೆಲವರಿಗೆ ನಿದ್ರೆಯೇ ಬಾರದು . ಮತ್ತೆ ಕೆಲವರಿಗೆ ನಿದ್ರೆಯ ಮಧ್ಯದಲ್ಲಿ ಎಚ್ಚರವಾಗಿ ಮತ್ತೆ ನಿದ್ರಿಸಲಾಗದಿರುವುದು. ಇದರಿಂದ ಮರುದಿನ ಬೆಳಗ್ಗೆ ಎದ್ದಾಗ ದೈಹಿಕವಾಗಿ ಹಾಗು ಮಾನಸಿಕವಾಗಿ ಬಳಲಿಕೆ ಕಂಡುಬರುವುದು. ಬೆಳಗ್ಗೆ ಬಹಳ ಮುಂಚಿತವಾಗಿ ಏಳುವುದೂ ನಿದ್ರೆಯ ಅಭಾವದ ಲಕ್ಷಣವೇ .
ಸುಖವಾದ ನಿದ್ರೆಯ ಲಾಭದಾಯಕ ಪರಿಣಾಮಗಳು.
- ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ .
- ಖಿನ್ನತೆ, ಒತ್ತಡ ಹಾಗು ಆತಂಕಗಳನ್ನು ದೂರ ಮಾಡುತ್ತದೆ .
- ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ .
- ಗಂಡಸರಲ್ಲಿ ನಿಮಿರು ರೋಗವನ್ನು ಗುಣಪಡಿಸುತ್ತದೆ .
- ದೇಹದ ಅಂಗಾಂಶಗಳ ದುರಸ್ತಿ ನಿದ್ರೆಯಲ್ಲೇ ಆಗುತ್ತದೆ .
- ದೇಹಕ್ಕೆ ಕಸುವನ್ನು ನೀಡಿ , ಬಲವನ್ನು ವೃದ್ಧಿಸುತ್ತದೆ .
- ಚರ್ಮದ ಕಾಂತಿ ಹೆಚ್ಚುತ್ತದೆ.
ಅನಿದ್ರೆಯ ಕಾರಣಗಳು ( sleep problems kannada)
ಕೆಲಸದ ಹಾಗು ಕೌಟುಂಬಿಕ ಒತ್ತಡಗಳು ನಿದ್ರಾಹೀನತೆಗೆ ಕಾರಣವಾಗಬಹುದು. ಮಾನಸಿಕ ದುಃಖ , ದೈಹಿಕ ನೋವು , ಮಲಬದ್ಧತೆ (constipation ) ಕಟ್ಟಿದ ಮೂಗು, ಜ್ವರ , ಕೆಮ್ಮು ಮುಂತಾದವು ತಾತ್ಕಾಲಿವಾಗಿ ಅನಿದ್ರತೆಯನ್ನು ಉಂಟು ಮಾಡಬಹುದು. ಜಾಗ ಬದಲಾಗುವುದರಿಂದ, ಪ್ರಖರವಾದ ಬೆಳಕು , ಗಲಾಟೆ , ಅತಿಯಾದ ತಾಪಮಾನ , ವಿಮಾನ ಯಾನ , ಶಿಫ್ಟಿನಲ್ಲಿ ಕೆಲಸ ಮಾಡುವುದು ಇವೆಲ್ಲವೂ ನಿದ್ರೆಗೆ ಅಡ್ಡಿಮಾಡಬಹುದು.
ಬಹಳ ಹೊತ್ತಿನವರೆಗೆ ಟಿವಿ ನೋಡುವುದು , ಮಲಗಿಕೊಂಡು ಸ್ಮಾರ್ಟ್ ಫೋನ್ ವೀಕ್ಷಿಸುವುದು , ಮಲಗುವ ಮುನ್ನ ಅಧಿಕ ಆಹಾರ ಸೇವಿಸುವುದು , ಕಾಫಿ ಸೇವಾಸನೆ ಮಾಡುವುದು ಇವೆಲ್ಲವೂ ನಿದ್ರಾ ಹಾನಿ ಮಾಡುತ್ತವೆ . ಇವನ್ನೇ ಬಹಳ ಕಾಲದವರೆಗೂ ಮುಂದುವರೆಸಿದರೆ ನಿದ್ರಾಹೀನತೆಯು ಶಾಶ್ವತವಾಗಿ ಉಳಿಯುತ್ತದೆ .
ಕ್ಯಾನ್ಸರಿನ ಚಿಕಿತ್ಸೆಗಳಾದ ಕಿಮೋಥೆರಪಿ ಹಾಗು ವಿಕಿರಣ ಚಿಕಿತ್ಸೆ ಸಹ ನಿದ್ರೆಗೆ ತಾತ್ಕಾಲಿಕವಾಗಿ ಮುಳುವಾಗಬಹುದು
ನಿದ್ರಾಹೀನತೆಯ ದುಷ್ಪರಿಣಾಮಗಳು
- ಸರಿಯಾಗಿ ನಿದ್ರೆ ಮಾಡದಿದ್ದಾಗ ಅಜೀರ್ಣ ಉಂಟಾಗಿ ಮಲಭದ್ದತೆ ಉಂಟಾಗುವುದು (indigestion and constipation).
- ಶರೀರದಲ್ಲಿ ನಿಶಕ್ತಿ ಹಾಗು ನೋವು ಕಾಣಿಸಿಕೊಳ್ಳುವುದು .
- ರೋಗ ನೀರೋಧಕ ಶಕ್ತಿ ಕುಂದುವುದು .
- ಲೈಂಗಿಕ ಶಕ್ತಿ ಕುಗ್ಗುವುದು . ( Read ಲೈಂಗಿಕ ಶಕ್ತಿ ಹೆಚ್ಚಿಸಲು 5 ಸೂಪರ್ ಹಣ್ಣುಗಳು 5 Fruits for Erectile Dysfunction in Kannada )
- ಕೆಲಸದ ಕಡೆ ಗಮನ ಹಾಗು ನೆನಪಿನ ಶಕ್ತಿ ಕಡಿಮೆಯಾಗುವುದು .
- ಗಂಡಸರಲ್ಲಿ ನಿಮಿರು ದೌರ್ಬಲ್ಯ ಪ್ರಾರಂಭವಾಗಬಹುದು.
- ವೀರ್ಯಾಣುಗಳ ಸಂಖ್ಯೆ ಕುಗ್ಗುವುದು. (ವೀರ್ಯಾಣುಗಳ ಸಂಖ್ಯೆ ಹಾಗು ಚಲನೆ ಹೆಚ್ಚಿಸಲು ಅತ್ಯುತ್ತಮ ಒಣ ಹಣ್ಣುಗಳು )
ನಿದ್ರಾಹೀನತೆಗೆ ಆಯುರ್ವೇದ ಚಿಕಿತ್ಸೆಗಳು (sleeping tips kannada)
ಒಳ್ಳೆಯ ನಿದ್ರೆ ಉತ್ತಮ ಆರೋಗ್ಯಕ್ಕೆ ಕಾರಣ. ಇದನ್ನರಿತ ನಮ್ಮ ಆಚಾರ್ಯರು ಆಯುರ್ವೇದದಲ್ಲಿ ಸುಖವಾದ ನಿದ್ರೆ ಬರಲು ಅನೇಕ ಚಿಕೆತ್ಸೆಗಳನ್ನು ಉಲ್ಲೇಖಿಸಿದ್ದಾರೆ . (ನಿದ್ರಾಹೀನತೆಗೆ 5 ಉತ್ತಮವಾದ ಆಯುರ್ವೇದ ಔಷಧಿಗಳು )
- ವಾತ ದೋಷದ ಅಸುಂತಲನೆಯಿಂದ ನಿದ್ರೆಯು ಹ್ರಾಸವಾಗುತ್ತದೆ . ಆದ್ದರಿಂದ ಮೊದಲು ವಾತ ದೋಷವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳುವುದು ಬಹಳ ಮುಖ್ಯ. (Vata Balancing)
- ನಿದ್ರಾಹೀನತೆಗೆ ಉತ್ತಮವಾದ ಆಯುರ್ವೇದ ಔಷಧಿಗಳನ್ನು ಬಳಸಿ
- ಆಹಾರದಲ್ಲಿ ಹಾಲು , ತುಪ್ಪ , ಮೊಸರು ಹಾಗು ಮಾಂಸದ ರಸ (ಸೂಪ್ ) ಇವನ್ನು ಸೇರಿಸಿಕೊಳ್ಳುವುದು ಒಳಿತು .
- ಮಧ್ಯಾನ್ಹದಲ್ಲಿ ಮೊಸರು ಹಾಗು ರಾತ್ರಿಯಲ್ಲಿ ಹಾಲು ಉಪಯೋಗಿಸಬೇಕು.
- ವಾರಕ್ಕೆ ಎರಡು ಬಾರಿಯಾದರೂ ಬೆಚ್ಚಗಿನ ಕ್ಷೀರಬಲಾ ತೈಲ ಅಥವಾ ಎಳ್ಳೆಣ್ಣೆ ಯನ್ನು ಶರೀರಕ್ಕೆ ಹಾಗು ತಲೆಗೆಹಚ್ಚಿ ಮಸಾಜ್ ಮಾಡಬೇಕು.
- ಮಲಗುವ ಮುನ್ನ ಬಿಸಿನೀರಿನಲ್ಲಿ ಸ್ನಾನ ಮಾಡಬೇಕು . ಕರಾವಳಿ ತೀರದಲ್ಲಿ ರಾತ್ರಿ ಮಲಗುವ ಮುನ್ನ ಸ್ನಾನ ಮಾಡುವ ಪದ್ಧತಿ ಇನ್ನೂ ಇದೆ.
- ರಾತ್ರಿ ನಿದ್ದೆ ಬಾರದಿದ್ದಲ್ಲಿಮಧ್ಯಾನ್ಹದಲ್ಲಿ ನಿದ್ರಿಸಬೇಡಿ. ಆದರೆ ವಯಸ್ಸಾದವರು , ಮಕ್ಕಳು , ರೋಗಿಗಳು , ಗರ್ಭವತಿಯರು , ಬಾಣಂತಿಯರು ಹಾಗು ಅತಿಯಾಗಿ ದೇಹ ದಂಡಿಸುವವರು ಮಧ್ಯಾನ್ಹ ಮಲಗಬಹುದು.
- ಮಲಗುವ ಮುನ್ನ ಹದಿನೈದು ನಿಮಿಷ ಧ್ಯಾನ ಮಾಡುವುದರಿಂದ ಹಾಗು ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ನಿದ್ರೆ ಹಿತವಾಗಿ ಬರುತ್ತದೆ .
- ಆಯುರ್ವೇದ ದಿನಚರ್ಯದಲ್ಲಿ , ಉತ್ತಮ ಅರೋಗ್ಯ ಹಾಗು ನಿದ್ರೆಗಾಗಿಪ್ರತಿ ದಿನವೂ ವ್ಯಾಯಾಮ ಮಾಡಲೇ ಬೇಕೆಂದು ಉಲ್ಲೇಖಿಸಿದೆ. ಆದ್ದರಿಂದ ಪ್ರತಿದಿನ ಬೆಳಗ್ಗೆ ೪೫ ನಿಮಿಷಗಳ ಕಾಲ ವಾಕಿಂಗ್ ಹಾಗು ಅನ್ಯ ವ್ಯಾಯಾಮಗಳನ್ನು ಮಾಡುವುದು ಒಳ್ಳೆಯ ಅಭ್ಯಾಸ.
- ಮಲಗುವ ಮುನ್ನ ಮೂರು ಗಂಟೆಗಳ ಮುಂಚೆ ಆಹಾರ ಸೇವಿಸಿ . ರಾತ್ರಿ ಕಾಫಿ ಅಥವಾ ಚಾ ಸೇವಿಸಬೇಡಿ. ಧೂಮಪಾನ ಹಾಗು ಮದ್ಯ ವ್ಯಸನಗಳಿಂದ ದೂರವಿರಿ .
- ರಾತ್ರಿ ಮಲಗುವ ಮುನ್ನ ಬಿಸಿಹಾಲಿಗೆ ತುಪ್ಪ ಮತ್ತು ಅರಿಶಿಣ ಬೆರೆಸಿ ಕುದಿಸಿ ಸೇವಿಸಿರಿ.
- ನಿಮ್ಮ ಮಲಗುವ ಕೋಣೆ ಸ್ವಚ್ಛವಾಗಿರಲಿ . ಅದನ್ನು ಮಲಗಲು ಮಾತ್ರ ಉಪಯೋಗಿಸಿ. ಈ ಕೋಣೆಯಲ್ಲಿ ಟಿವಿ ಅಥವಾ ಪೋನ್ಗಳನ್ನು ಇಡಬೇಡಿ.
- ಅಶ್ವಗಂಧ (Ashwagandha) (Read ಅಶ್ವಗಂಧದ ಉಪಯೋಗಗಳು Benefits of Ashwagandha in Kannada ) , ಸರ್ಪಗಂಧ, ಗಸಗಸೆ , ಮುಂತಾದ ಮೂಲಿಕೆಗಳೂ ಒಳ್ಳೆಯ ನಿದ್ರೆ ಬರುವಲ್ಲಿ ಸಹಾಯ ಮಾಡುತ್ತವೆ . ಆದರೆ ಇವನ್ನು ಉಪಯೋಗಿಸುವ ಮೊದಲು ತಜ್ಞ ಆಯುರ್ವೇದ ವೈದ್ಯರ ಸಲಹೆ ಪಡೆಯಿರಿ.
ಚೆನ್ನಾಗಿ ನಿದ್ರಿಸಿ ಉತ್ತಮ ಅರೋಗ್ಯ ಪಡೆಯಿರಿ.
ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ
+91 9945995660 / +91 9448433911 ಗೆ ಕರೆ ಮಾಡಿ
ವಾಟ್ಸ್ ಅಪ್ + 91 6360108663 /