ನಿದ್ರಾಹೀನತೆಗೆ ಆಯುರ್ವೇದ ಚಿಕಿತ್ಸೆಗಳು ( ayurvedic treatment for sleep kannada )


ಮನುಷ್ಯನು ಆರೋಗ್ಯವಾಗಿರಬೇಕಾದರೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರಿಸಬೇಕು . ನಿದ್ರಾಹೀನತೆಯು ದೇಹದ ಶಕ್ತಿಗುಂದಿಸಿ, ಮನಸ್ಸನ್ನು ಅಸಂತುಲಿತಗೊಳಿಸುತ್ತದೆ . ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಿ , ಲೈಂಗಿಕವಾಗಿಯೂ ಬಲಹೀನನನ್ನಾಗಿಸುತ್ತದೆ . ಸುಖ ನಿದ್ರೆಗಾಗಿ ಆಯುರ್ವೇದದಲ್ಲಿ ಅನೇಕ ಚಿಕಿತ್ಸೆಗಳನ್ನು ಉಲ್ಲೇಖಿಸಿದ್ದಾರೆ .

Read this article in English Ayurvedic Remedies, Medicines and Tips for Good Sleep

ವಿಷಯ ಸೂಚಿ

ನಿದ್ರಾಹೀನತೆ ಎಂದರೇನು ? (insomnia meaning in kannada)

ಸುಖವಾದ ನಿದ್ರೆಯ ಲಾಭದಾಯಕ ಪರಿಣಾಮಗಳು.

ನಿದ್ರಾಹೀನತೆಯ ದುಷ್ಪರಿಣಾಮಗಳು

ನಿದ್ರಾಹೀನತೆಗೆ ಆಯುರ್ವೇದ ಚಿಕಿತ್ಸೆಗಳು (sleeping tips kannada)

ನಿದ್ರಾಹೀನತೆ ಎಂದರೇನು ? (insomnia meaning in kannada)

ನಿದ್ರಾಹೀನತೆ ಗೆ ಇಂಗ್ಲೀಷ್ ನಲ್ಲಿ  ಇನ್ಸೋಮ್ನಿಯಾ (insomnia)  ಎನ್ನುತ್ತಾರೆ . ನಿದ್ರಾಹೀನತೆ ಎಂದರೆ ಸುಖವಾಗಿ ನಿದ್ರೆ ಮಾಡುವುದಕ್ಕೆ ಆಗದಿರುವುದು. ಕೆಲವರಿಗೆ ನಿದ್ರೆಯೇ ಬಾರದು . ಮತ್ತೆ ಕೆಲವರಿಗೆ ನಿದ್ರೆಯ ಮಧ್ಯದಲ್ಲಿ ಎಚ್ಚರವಾಗಿ ಮತ್ತೆ ನಿದ್ರಿಸಲಾಗದಿರುವುದು. ಇದರಿಂದ ಮರುದಿನ ಬೆಳಗ್ಗೆ ಎದ್ದಾಗ ದೈಹಿಕವಾಗಿ ಹಾಗು ಮಾನಸಿಕವಾಗಿ ಬಳಲಿಕೆ ಕಂಡುಬರುವುದು. ಬೆಳಗ್ಗೆ ಬಹಳ ಮುಂಚಿತವಾಗಿ ಏಳುವುದೂ ನಿದ್ರೆಯ ಅಭಾವದ ಲಕ್ಷಣವೇ .

ಸುಖವಾದ ನಿದ್ರೆಯ ಲಾಭದಾಯಕ ಪರಿಣಾಮಗಳು.

  • ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ .
  • ಖಿನ್ನತೆ, ಒತ್ತಡ  ಹಾಗು ಆತಂಕಗಳನ್ನು ದೂರ ಮಾಡುತ್ತದೆ .
  • ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ .
  • ಗಂಡಸರಲ್ಲಿ ನಿಮಿರು ರೋಗವನ್ನು ಗುಣಪಡಿಸುತ್ತದೆ .
  • ದೇಹದ ಅಂಗಾಂಶಗಳ ದುರಸ್ತಿ ನಿದ್ರೆಯಲ್ಲೇ ಆಗುತ್ತದೆ .
  • ದೇಹಕ್ಕೆ ಕಸುವನ್ನು ನೀಡಿ , ಬಲವನ್ನು ವೃದ್ಧಿಸುತ್ತದೆ .
  • ಚರ್ಮದ ಕಾಂತಿ ಹೆಚ್ಚುತ್ತದೆ.

ಅನಿದ್ರೆಯ ಕಾರಣಗಳು ( sleep problems kannada)

ಕೆಲಸದ ಹಾಗು  ಕೌಟುಂಬಿಕ ಒತ್ತಡಗಳು ನಿದ್ರಾಹೀನತೆಗೆ ಕಾರಣವಾಗಬಹುದು. ಮಾನಸಿಕ ದುಃಖ , ದೈಹಿಕ ನೋವು , ಮಲಬದ್ಧತೆ (constipation ) ಕಟ್ಟಿದ ಮೂಗು, ಜ್ವರ , ಕೆಮ್ಮು ಮುಂತಾದವು ತಾತ್ಕಾಲಿವಾಗಿ ಅನಿದ್ರತೆಯನ್ನು ಉಂಟು ಮಾಡಬಹುದು. ಜಾಗ ಬದಲಾಗುವುದರಿಂದ, ಪ್ರಖರವಾದ ಬೆಳಕು , ಗಲಾಟೆ , ಅತಿಯಾದ ತಾಪಮಾನ , ವಿಮಾನ ಯಾನ , ಶಿಫ್ಟಿನಲ್ಲಿ ಕೆಲಸ ಮಾಡುವುದು ಇವೆಲ್ಲವೂ ನಿದ್ರೆಗೆ ಅಡ್ಡಿಮಾಡಬಹುದು.

ಬಹಳ ಹೊತ್ತಿನವರೆಗೆ ಟಿವಿ ನೋಡುವುದು , ಮಲಗಿಕೊಂಡು ಸ್ಮಾರ್ಟ್ ಫೋನ್ ವೀಕ್ಷಿಸುವುದು , ಮಲಗುವ ಮುನ್ನ ಅಧಿಕ ಆಹಾರ ಸೇವಿಸುವುದು , ಕಾಫಿ ಸೇವಾಸನೆ ಮಾಡುವುದು ಇವೆಲ್ಲವೂ ನಿದ್ರಾ ಹಾನಿ ಮಾಡುತ್ತವೆ . ಇವನ್ನೇ ಬಹಳ ಕಾಲದವರೆಗೂ ಮುಂದುವರೆಸಿದರೆ ನಿದ್ರಾಹೀನತೆಯು ಶಾಶ್ವತವಾಗಿ ಉಳಿಯುತ್ತದೆ .

ಕ್ಯಾನ್ಸರಿನ ಚಿಕಿತ್ಸೆಗಳಾದ  ಕಿಮೋಥೆರಪಿ ಹಾಗು  ವಿಕಿರಣ ಚಿಕಿತ್ಸೆ  ಸಹ ನಿದ್ರೆಗೆ ತಾತ್ಕಾಲಿಕವಾಗಿ ಮುಳುವಾಗಬಹುದು

ನಿದ್ರಾಹೀನತೆಯ ದುಷ್ಪರಿಣಾಮಗಳು

  1. ಸರಿಯಾಗಿ ನಿದ್ರೆ ಮಾಡದಿದ್ದಾಗ ಅಜೀರ್ಣ ಉಂಟಾಗಿ ಮಲಭದ್ದತೆ ಉಂಟಾಗುವುದು (indigestion and constipation).
  2. ಶರೀರದಲ್ಲಿ ನಿಶಕ್ತಿ ಹಾಗು ನೋವು ಕಾಣಿಸಿಕೊಳ್ಳುವುದು .
  3. ರೋಗ ನೀರೋಧಕ ಶಕ್ತಿ  ಕುಂದುವುದು .
  4. ಲೈಂಗಿಕ ಶಕ್ತಿ ಕುಗ್ಗುವುದು . ( Read ಲೈಂಗಿಕ ಶಕ್ತಿ ಹೆಚ್ಚಿಸಲು 5 ಸೂಪರ್ ಹಣ್ಣುಗಳು 5 Fruits for Erectile Dysfunction in Kannada )
  5. ಕೆಲಸದ ಕಡೆ ಗಮನ ಹಾಗು ನೆನಪಿನ ಶಕ್ತಿ ಕಡಿಮೆಯಾಗುವುದು .
  6. ಗಂಡಸರಲ್ಲಿ ನಿಮಿರು ದೌರ್ಬಲ್ಯ ಪ್ರಾರಂಭವಾಗಬಹುದು.
  7. ವೀರ್ಯಾಣುಗಳ ಸಂಖ್ಯೆ ಕುಗ್ಗುವುದು. (ವೀರ್ಯಾಣುಗಳ ಸಂಖ್ಯೆ ಹಾಗು ಚಲನೆ ಹೆಚ್ಚಿಸಲು ಅತ್ಯುತ್ತಮ ಒಣ ಹಣ್ಣುಗಳು )

ನಿದ್ರಾಹೀನತೆಗೆ ಆಯುರ್ವೇದ ಚಿಕಿತ್ಸೆಗಳು (sleeping tips kannada)

ಒಳ್ಳೆಯ ನಿದ್ರೆ ಉತ್ತಮ ಆರೋಗ್ಯಕ್ಕೆ ಕಾರಣ. ಇದನ್ನರಿತ ನಮ್ಮ ಆಚಾರ್ಯರು ಆಯುರ್ವೇದದಲ್ಲಿ ಸುಖವಾದ  ನಿದ್ರೆ ಬರಲು ಅನೇಕ ಚಿಕೆತ್ಸೆಗಳನ್ನು ಉಲ್ಲೇಖಿಸಿದ್ದಾರೆ . (ನಿದ್ರಾಹೀನತೆಗೆ 5 ಉತ್ತಮವಾದ ಆಯುರ್ವೇದ ಔಷಧಿಗಳು )

  • ವಾತ ದೋಷದ ಅಸುಂತಲನೆಯಿಂದ ನಿದ್ರೆಯು ಹ್ರಾಸವಾಗುತ್ತದೆ . ಆದ್ದರಿಂದ ಮೊದಲು ವಾತ ದೋಷವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳುವುದು ಬಹಳ ಮುಖ್ಯ. (Vata Balancing)
  • ನಿದ್ರಾಹೀನತೆಗೆ ಉತ್ತಮವಾದ ಆಯುರ್ವೇದ ಔಷಧಿಗಳನ್ನು ಬಳಸಿ
  • ಆಹಾರದಲ್ಲಿ ಹಾಲು , ತುಪ್ಪ , ಮೊಸರು ಹಾಗು ಮಾಂಸದ ರಸ (ಸೂಪ್ ) ಇವನ್ನು ಸೇರಿಸಿಕೊಳ್ಳುವುದು ಒಳಿತು .
  • ಮಧ್ಯಾನ್ಹದಲ್ಲಿ ಮೊಸರು ಹಾಗು ರಾತ್ರಿಯಲ್ಲಿ ಹಾಲು ಉಪಯೋಗಿಸಬೇಕು.
  • ವಾರಕ್ಕೆ ಎರಡು ಬಾರಿಯಾದರೂ ಬೆಚ್ಚಗಿನ ಕ್ಷೀರಬಲಾ ತೈಲ ಅಥವಾ ಎಳ್ಳೆಣ್ಣೆ ಯನ್ನು ಶರೀರಕ್ಕೆ ಹಾಗು ತಲೆಗೆಹಚ್ಚಿ ಮಸಾಜ್ ಮಾಡಬೇಕು.
  • ಮಲಗುವ ಮುನ್ನ ಬಿಸಿನೀರಿನಲ್ಲಿ ಸ್ನಾನ ಮಾಡಬೇಕು . ಕರಾವಳಿ ತೀರದಲ್ಲಿ ರಾತ್ರಿ ಮಲಗುವ ಮುನ್ನ ಸ್ನಾನ ಮಾಡುವ ಪದ್ಧತಿ ಇನ್ನೂ ಇದೆ.
  • ರಾತ್ರಿ ನಿದ್ದೆ ಬಾರದಿದ್ದಲ್ಲಿಮಧ್ಯಾನ್ಹದಲ್ಲಿ ನಿದ್ರಿಸಬೇಡಿ. ಆದರೆ ವಯಸ್ಸಾದವರು , ಮಕ್ಕಳು , ರೋಗಿಗಳು , ಗರ್ಭವತಿಯರು , ಬಾಣಂತಿಯರು ಹಾಗು ಅತಿಯಾಗಿ  ದೇಹ ದಂಡಿಸುವವರು ಮಧ್ಯಾನ್ಹ ಮಲಗಬಹುದು.
  • ಮಲಗುವ ಮುನ್ನ ಹದಿನೈದು ನಿಮಿಷ ಧ್ಯಾನ ಮಾಡುವುದರಿಂದ ಹಾಗು ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ನಿದ್ರೆ ಹಿತವಾಗಿ ಬರುತ್ತದೆ .
  • ಆಯುರ್ವೇದ ದಿನಚರ್ಯದಲ್ಲಿ , ಉತ್ತಮ ಅರೋಗ್ಯ ಹಾಗು ನಿದ್ರೆಗಾಗಿಪ್ರತಿ ದಿನವೂ ವ್ಯಾಯಾಮ ಮಾಡಲೇ ಬೇಕೆಂದು ಉಲ್ಲೇಖಿಸಿದೆ. ಆದ್ದರಿಂದ ಪ್ರತಿದಿನ ಬೆಳಗ್ಗೆ ೪೫ ನಿಮಿಷಗಳ ಕಾಲ ವಾಕಿಂಗ್ ಹಾಗು ಅನ್ಯ ವ್ಯಾಯಾಮಗಳನ್ನು ಮಾಡುವುದು ಒಳ್ಳೆಯ ಅಭ್ಯಾಸ.
  • ಮಲಗುವ ಮುನ್ನ ಮೂರು ಗಂಟೆಗಳ ಮುಂಚೆ ಆಹಾರ ಸೇವಿಸಿ . ರಾತ್ರಿ ಕಾಫಿ ಅಥವಾ ಚಾ ಸೇವಿಸಬೇಡಿ. ಧೂಮಪಾನ ಹಾಗು ಮದ್ಯ ವ್ಯಸನಗಳಿಂದ ದೂರವಿರಿ .
  • ರಾತ್ರಿ ಮಲಗುವ ಮುನ್ನ ಬಿಸಿಹಾಲಿಗೆ ತುಪ್ಪ ಮತ್ತು ಅರಿಶಿಣ ಬೆರೆಸಿ ಕುದಿಸಿ ಸೇವಿಸಿರಿ.
  • ನಿಮ್ಮ ಮಲಗುವ ಕೋಣೆ ಸ್ವಚ್ಛವಾಗಿರಲಿ . ಅದನ್ನು ಮಲಗಲು ಮಾತ್ರ ಉಪಯೋಗಿಸಿ. ಈ ಕೋಣೆಯಲ್ಲಿ ಟಿವಿ ಅಥವಾ ಪೋನ್ಗಳನ್ನು ಇಡಬೇಡಿ.
  • ಅಶ್ವಗಂಧ (Ashwagandha) (Read ಅಶ್ವಗಂಧದ ಉಪಯೋಗಗಳು Benefits of Ashwagandha in Kannada ) , ಸರ್ಪಗಂಧ, ಗಸಗಸೆ , ಮುಂತಾದ ಮೂಲಿಕೆಗಳೂ ಒಳ್ಳೆಯ ನಿದ್ರೆ ಬರುವಲ್ಲಿ ಸಹಾಯ ಮಾಡುತ್ತವೆ . ಆದರೆ ಇವನ್ನು ಉಪಯೋಗಿಸುವ ಮೊದಲು ತಜ್ಞ ಆಯುರ್ವೇದ ವೈದ್ಯರ ಸಲಹೆ ಪಡೆಯಿರಿ.

ಚೆನ್ನಾಗಿ ನಿದ್ರಿಸಿ ಉತ್ತಮ ಅರೋಗ್ಯ ಪಡೆಯಿರಿ.

ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ

ಉಚಿತ ಆಯುರ್ವೇದ ಸಮಾಲೋಚನೆ

+91 9945995660 / +91 9448433911 ಗೆ ಕರೆ ಮಾಡಿ

ವಾಟ್ಸ್ ಅಪ್ + 91 6360108663 /


Chat with us!
Need help?
Hello!
How can we help you?