ತೆಂಗಿನ ಪ್ರತಿಯೊಂದು ಭಾಗವು ಉಪಯುಕ್ತವಾಗಿದೆ . ಆದ್ದರಿಂದ ಇದನ್ನು ಕಲ್ಪವೃಕ್ಷವೆಂದು ಕರೆಯುತ್ತಾರೆ. ಆಯುರ್ವೇದದಲ್ಲಿ ತೆಂಗಿನಕಾಯಿ , ಎಳನೀರು ಅಥವಾ ಎಳೆನೀರಿನ ಉಪಯೋಗಗಳನ್ನು ವಿವರಿಸುತ್ತಾರೆ.
Read this article in english Ayurveda Health Benefits of Coconut, Tender Coconut Water, Coconut Shell and Oil
ಆಯುರ್ವೇದವು ಅನೇಕ ಆರೋಗ್ಯ ಪರಿಸ್ಥಿತಿಗಳಲ್ಲಿ ತೆಂಗಿನಕಾಯನ್ನು ಶಿಫಾರಸು ಮಾಡುತ್ತದೆ. ನಿಮಿರು ದೌರ್ಬಲ್ಯ ಮತ್ತು ಶೀಘ್ರ ಸ್ಖಲನದಲ್ಲಿ ತೆಂಗಿನಕಾಯಿ ತಿರಳು ಉಪಯುಕ್ತವಾದರೆ, ಕೂದಲು ಮತ್ತು ಚರ್ಮದ ಆರೈಕೆಗಾಗಿ ತೆಂಗಿನ ಎಣ್ಣೆ ಉಪಯೋಗವಾಗುತ್ತದೆ, ಉರಿಮೂತ್ರದಲ್ಲಿ ಎಳನೀರು , ಮಧುಮೇಹ (ಡಯಾಬಿಟಿಸ್) ಮತ್ತು ಐಬಿಎಸ್ (ಕರುಳಿನ ಉರಿಯೂತ ) ಗಳಿಗೆ ತೆಂಗಿನ ಹೂವುಗಳನ್ನು ಬಳಸುವ ವಿಧಾನಗಳನ್ನು ಆಯುರ್ವೇದದಲ್ಲಿ ವಿವರಿಸಲಾಗಿದೆ.
ಆಯುರ್ವೇದದ ಪ್ರಕಾರ ತೆಂಗಿನಕಾಯಿಯ ಆರೋಗ್ಯ ಪ್ರಯೋಜನಗಳು
ತೆಂಗಿನಕಾಯಿಯನ್ನು ಆಯುರ್ವೇದದಲ್ಲಿ ನಾರಿಕೇಲಾ ಎಂದು ಕರೆಯಲಾಗುತ್ತದೆ. ಈ ಸಸ್ಯದ ಕಾಯಿ, ಹೂವು, ಎಳನೀರು, ಚಿಪ್ಪು ಮತ್ತು ಮೂಲವನ್ನು ಅನೇಕ ಆಯುರ್ವೇದ ಹಾಗು ಸಿದ್ಧ ಪದ್ದತಿಯ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಆಯುರ್ವೇದದ ಪಠ್ಯಗಳು ತೆಂಗಿನಕಾಯಿಯ ಗುಣಲಕ್ಷಣಗಳನ್ನು ಈ ಕೆಳಗಿನಂತೆ ವಿವರಿಸುತ್ತದೆ.
ತೆಂಗಿನಕಾಯಿ ರುಚಿಗೆ ಸಿಹಿಯಾಗಿರುತ್ತದೆ (ಮಧುರ ರಸ) ಹಾಗು ದೇಹದ ಉಷ್ಣತೆ ಕಡಿಮೆ ಮಾಡುತ್ತದೆ (ಶೀತ ವೀರ್ಯ). ಇದು ಅಂಗಾಂಶಗಳ ಸ್ನಿಗ್ಧತೆ ಹೆಚ್ಚಿಸಿ ಉರಿಮೂತ್ರ ಕಡಿಮೆ ಮಾಡುತ್ತದೆ. ತೆಂಗಿನಕಾಯಿ ಯನ್ನು ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟ (ಗುರು). ಹಲವರಿಗೆ ಇದು ಮಲಬದ್ಧತೆಗೆ ಕಾರಣವಾಗಬಹುದು.
ತ್ರಿದೋಷಗಳ ಮೇಲೆ ಇದರ ಪರಿಣಾಮ ಹೀಗಿರುತ್ತದೆ . ತೆಂಗು ವಾತ ದೋಷ, ಪಿತ್ತ ದೋಷ ಮತ್ತು ರಕ್ತವನ್ನು ಸಮತೋಲನಗೊಳಿಸುತ್ತದೆ. ಈ ಕಾಯಿ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ (ಬಲ್ಯ) ಮತ್ತು ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ಸ್ವಲ್ಪ ತೂಕವನ್ನು ಹೆಚ್ಚಿಸಿಕೊಳ್ಳಲು ಬಯಸುವ ಜನರು ಇದನ್ನು ಬಳಸುವುದರಿಂದ ದೇಹದ ತೂಕ ಹಾಗು ಶಕ್ತಿ ಹೆಚ್ಚುತ್ತದೆ (ಬೃಂಹಣ).
ಸಂಪೂರ್ಣವಾಗಿ ಮಾಗಿದ ತೆಂಗಿನ ತಿರುಳಿನ ಉಪಯೋಗಗಳು
ಆಯುರ್ವೇದದ ಪ್ರಕಾರ ಸಂಪೂರ್ಣವಾಗಿ ಬಲಿತ ತೆಂಗಿನ ತಿರುಳು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದು ಪಿತ್ತವನ್ನು ಅಸಮತೋಲನಗೊಳಿಸುತ್ತದೆ. ದುರ್ಬಲ ಅಗ್ನಿ ಅಥವಾ ದುರ್ಬಲ ಜೀರ್ಣಕ್ರಿಯೆ ಹೊಂದಿರುವ ವ್ಯಕ್ತಿಗಳಲ್ಲಿ ಇದು ಅಜೀರ್ಣ, ಆಮ್ಲೀಯತೆ ಮತ್ತು ಮಲಬದ್ಧತೆಗೆ ಕಾರಣವಾಗಬಹುದು. ಇಷ್ಟಾದರೂ ಬಲಿತ ತೆಂಗಿನ ತಿರಳು ಅನೇಕ ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಅದನ್ನು ಈ ಕೆಳಗಿನಂತೆ ವಿವರಿಸಲಾಗಿದೆ
- ಸಂಪೂರ್ಣವಾಗಿ ಮಾಗಿದ ತಿರುಳು ಉತ್ತಮ ದೇಹದ ಶೀತಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಅತ್ಯುತ್ತಮ ಕಾಮೋತ್ತೇಜಕ (ವಾಜಿಕರ) ವಾಗಿದೆ.
- ಇದು ನಿಮಿರು ದೌರ್ಬಲ್ಯದ ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ .
- ಬಲಿತ ತೆಂಗಿನ ತಿರುಳು ಪುರುಷರ ವೀರ್ಯದ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸುತ್ತದೆ (ಶುಕ್ರ ಧಾತು). ಇದರಿಂದ ವೀರ್ಯಾಣುಗಳ ಸಂಖ್ಯೆ ಹಾಗು ಅವುಗಳ ಚಲನೆ ಹೆಚ್ಚುತ್ತದೆ.
- ಇದು ಶೀತಲವಾಗಿರುವುದರಿಂದ ಉರಿಮೂತ್ರ ಹಾಗು ಮೂತ್ರನಾಳಗಳ ಸೋಂಕಿನಲ್ಲಿ ಉಪಯುಕ್ತವಾಗಿದೆ.
- ಬಲಿತ ತೆಂಗಿನ ತಿರುಳಿನಲ್ಲಿ ನಾರಿನ ಅಂಶ ಅಧಿಕವಾಗಿರುತ್ತದೆ ಮತ್ತು ಕರುಳನ್ನು ಶುದ್ಧಗೊಳಿಸುತ್ತದೆ.
- ಸಂಪೂರ್ಣವಾಗಿ ಮಾಗಿದ ತಿರುಳನ್ನು ಭಾರತೀಯ ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ.
ಎಳನೀರಿನ ಉಪಯೋಗಗಳು ಮತ್ತು ಪ್ರಯೋಜನಗಳು
ಎಳೆಯ ತೆಂಗಿನ ನೀರು ಕರುಳಿನ ಮೇಲೆ ಹಿತವಾದ ಪರಿಣಾಮವನ್ನು ಬೀರುತ್ತದೆ. ಇದನ್ನು ಶಿಶುಗಳಿಗೆ ಅತಿಸಾರ (ಭೇದಿ) ಹಾಗು ವಾಂತಿಯಾದಾಗ ಪರಿಹಾರವಾಗಿ ನೀಡಬಹುದು. ಇದನ್ನು “ಕ್ರಿಮಿಘ್ನಾ” ಎಂದು ಕರೆಯಲಾಗುತ್ತದೆ, ಅಂದರೆ ಕರುಳಿನ ಪರಾವಲಂಬಿ ಕ್ರಿಮಿಗಳನ್ನು ಕೊಲ್ಲುತ್ತದೆ. ಮಕ್ಕಳಿಗೆ ನಿಯಮಿತ ಆರೋಗ್ಯ ಪಾನೀಯವಾಗಿ ನೀಡಿದಾಗ, ಇದು ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಉತ್ತಮ ಪೋಷಕಾಂಶಗಳನ್ನು ಪೂರೈಸುತ್ತದೆ. ಎಳೆಯ ತೆಂಗಿನ ನೀರಿನ ನಿಯಮಿತ ಸೇವನೆಯು ಮೂತ್ರವು ಸಲೀಸಾಗಿ ವಿಸರ್ಜನೆಗೊಳ್ಳುವಲ್ಲಿ ಸಹಾಯ ಮಾಡುತ್ತದೆ. ಮತ್ತು ಮೂತ್ರದ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಮೂತ್ರಪಿಂಡದಲ್ಲಿರುವ ಸಣ್ಣ ಸಣ್ಣ ಕಲ್ಲುಗಳನ್ನು ಹೊರಹಾಕುತ್ತದೆ. ಚರ್ಮದಲ್ಲಿ ಉರಿ ಉಂಟಾದಾಗ (ಸೂರ್ಯನ ಸುಡುವಿಕೆ, ದದ್ದುಗಳು, ದಡಾರ , ಸೀತಾಳ ಇತ್ಯಾದಿಗಳಿಂದ) ಎಳನೀರನ್ನು ಸವರುವುದರಿಂದ ಉರಿ ಕಡಿಮೆಯಾಗುತ್ತದೆ. ಎಳೆಯ ತೆಂಗಿನ ನೀರು ಚರ್ಮದ ಹೊಳಪು ಮತ್ತು ಕೋಮಲತೆಯನ್ನು ಹೆಚ್ಚಿಸುತ್ತದೆ. ಈ ನೀರಿನ ಸೇವನೆಯಿಂದ ಬಿಕ್ಕು , ಬಾಯಿ ಒಣಗುವುದು ಮತ್ತು ಬಾಯಾರಿಕೆ ಶೀಘ್ರವಾಗಿ ಕಡಿಮೆಯಾಗುತ್ತದೆ.
ತೆಂಗಿನ ನೀರಿನ ಕೆಳಗಿನ ಗುಣಲಕ್ಷಣಗಳನ್ನು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ
- ಇದು ರುಚಿಯಲ್ಲಿ ಸಿಹಿಯಾಗಿರುತ್ತದೆ ಮತ್ತು ಚರ್ಮದ ತೇವಾಂಶವನ್ನು ಹೆಚ್ಚಿಸುತ್ತದೆ.
- ಇದು ದೇಹದ ಶೀತಕವಾಗಿ ಕಾರ್ಯನಿರ್ವಹಿಸುತ್ತದೆ.
- ತೆಂಗಿನ ನೀರು ಉತ್ತಮ ಕಾಮೋತ್ತೇಜಕ ಮತ್ತು ಲೈಂಗಿಕ ಶಕ್ತಿ ಮತ್ತು ಬಯಕೆಯನ್ನು ಹೆಚ್ಚಿಸುತ್ತದೆ.
- ಇದು ವೀರ್ಯದ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ನಿಮಿರು ದೌರ್ಬಲ್ಯದಿಂದಬಳಲುತ್ತಿರುವ ಪುರುಷರಿಗೆ ಬಹಳ ಸಹಾಯಕವಾಗುತ್ತದೆ ಹಾಗು ಇದಕ್ಕೆ ಅತ್ಯುತ್ತಮ ನೈಸರ್ಗಿಕ ಆಯುರ್ವೇದ ಮನೆಮದ್ದು.
- ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ತಕ್ಷಣ ದೇಹಕ್ಕೆ ಶಕ್ತಿ ನೀಡುತ್ತದೆ
- ಇದು ಬಾಯಾರಿಕೆಯನ್ನು ನೀಗಿಸುತ್ತದೆ, ಉತ್ತಮ ಹಸಿವನ್ನುಂಟು ಮಾಡುತ್ತದೆ.
- ಇದು ಉಲ್ಬಣಗೊಂಡ ವಾತ ಮತ್ತು ಪಿತ್ತವನ್ನು ಶಮನಗೊಳಿಸುತ್ತದೆ.
- ಇದು ದೇಹ ಮತ್ತು ಮೂತ್ರಕೋಶಗಳನ್ನು ಶುದ್ಧಗೊಳಿಸುತ್ತದೆ
ತೆಂಗಿನ ಹೂವಿನ ಆರೋಗ್ಯ ಪ್ರಯೋಜನಗಳು
ಅತಿಸಾರ ಮತ್ತು ಭೇದಿಗಳಲ್ಲಿ ಆಗಾಗ್ಗೆ ಕರುಳಿನ ಚಲನೆಯನ್ನು ತಡೆಗಟ್ಟಲು ಹೂವುಗಳನ್ನು ಬಳಸಲಾಗುತ್ತದೆ. ಕರುಳಿನ ಉರಿಯೂತದಲ್ಲಿ (ಐಬಿಎಸ್) ಇದು ತುಂಬಾ ಉಪಯುಕ್ತವಾಗಿದೆ. ಉಲ್ಬಣಿಸಿದ ಪಿತ್ತ ಮತ್ತು ರಕ್ತವನ್ನು ಶಮನಗೊಳಿಸುತ್ತದೆ. ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತಿದ್ದರೆ ಅದನ್ನು ಕಡಿಮೆ ಮಾಡಲು ಹೂವುಗಳನ್ನು ಉಪಯೋಗಿಸುತ್ತಾರೆ . ಅವು ದೇಹದ ಶೀತಕವಾಗಿ ಕಾರ್ಯನಿರ್ವಹಿಸುತ್ತವೆ.
ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ
+91 9945995660 / +91 9448433911 ಗೆ ಕರೆ ಮಾಡಿ
ವಾಟ್ಸ್ ಅಪ್ + 91 6360108663 /