ಮಲಬದ್ಧತೆಗೆ ನೈಸರ್ಗಿಕ ಆಯುರ್ವೇದ ಪರಿಹಾರಗಳು constipation remedies kannada


ಆಯುರ್ವೇದವು , ಮಲಬದ್ಧತೆಗೆ ಸರಳವಾದ ಮನೆಮದ್ದುಗಳನ್ನು ವಿವರಿಸುತ್ತದೆ. ತುಪ್ಪ ( ghee ), ಜೀರಿಗೆ (Cumin seeds ) , ಹುರುಳಿ ಕಾಳು (horse gram ), ಆಲಿವ್ ಎಣ್ಣೆ ಮುಂತಾದ ಗಿಡಮೂಲಿಕೆಗಳನ್ನು ಬಳಸಿ ಈ ಆಯುರ್ವೇದ ಚಿಕಿತ್ಸೆಗಳನ್ನು  ಮಾಡಬಹುದು.

ವಿಷಯದ ಕೋಷ್ಟಕ

ಮಲಬದ್ಧತೆ ಎಂದರೇನು ?

ಮಲಬದ್ಧತೆಯ ಬಗ್ಗೆ ಆಯುರ್ವೇದ ಏನು ಹೇಳುತ್ತದೆ?

ಮಲಬದ್ಧತೆಗೆ ಕಾರಣಗಳು – ಆಯುರ್ವೇದ ನೋಟ

ಮಲಬದ್ಧತೆಗೆ ಉತ್ತಮ  10 ನೈಸರ್ಗಿಕ  ಆಯುರ್ವೇದ ಮನೆಮದ್ದುಗಳು

Read this article in English Natural Ayurvedic Remedies for Constipation


ಮಲಬದ್ಧತೆ ಎಂದರೇನು ?

ಮಲಬದ್ಧತೆ ಜೀರ್ಣಕ್ರಿಯೆಯ ಸಾಮಾನ್ಯ ಸಮಸ್ಯೆ .  ಮಲಬದ್ಧತೆಯಲ್ಲಿ  ಕರುಳಿನ ಚಲನೆಗಳು ಅಸಹಜವಾಗಿರುತ್ತವೆ . ವ್ಯಕ್ತಿಯಿಂದ ವ್ಯಕ್ತಿಗೆ ಇದು ಬೇರೆ ಬೇರೆ ರೀತಿಯಲ್ಲಿ ಕಾಣಬರುತ್ತದೆ . ಅವರು ಸೇವಿಸುವ ಆಹಾರ, ಅವರ ವ್ಯಾಯಾಮ ಅಭ್ಯಾಸ, ನಿದ್ರಾ ಕ್ರಮ ಇತ್ಯಾದಿಗಳ ಮೇಲೆ ಮಲಭಾದ್ದತೆಯ ತೀವ್ರತೆ ಅವಲಂಬಿತವಾಗಿರುತ್ತದೆ . ವಾರದಲ್ಲಿ ಮೂರುಬಾರಿ ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಮಲಪ್ರವೃತ್ತವಾದಾಗ ಅದನ್ನು ಮಲಭದ್ದತೆ ಎಂದು ಪರಿಗಣಿಸಲಾಗುತ್ತದೆ.


ಮಲಬದ್ಧತೆಯ ಬಗ್ಗೆ ಆಯುರ್ವೇದ ಏನು ಹೇಳುತ್ತದೆ ?

ಮಲಬದ್ಧತೆಯನ್ನು ಆಯುರ್ವೇದದಲ್ಲಿ ‘ಮಲಬದ್ದಾ’ ಅಥವಾ ‘ವಿಭಂಧ’ ಎಂದೂ ಕರೆಯುತ್ತಾರೆ.

ಆಯುರ್ವೇದ ಆಚಾರ್ಯರು ದಿನಚರಿಯನ್ನು ವಿವರಿಸುವಾಗ , ಮಲ ವಿಸರ್ಜನಾ ಕ್ರಿಯೆಗೆ ಆದ್ಯತೆ ನೀಡಿರುತ್ತಾರೆ . ದೇಹದ ತ್ಯಾಜ್ಯವನ್ನು ವಿಸರ್ಜಿಸುವ ಈ ಕ್ರಿಯೆ , ದೇಹವನ್ನು ಶುದ್ಧಿಗೊಳಿಸುತ್ತದೆ . ಯಾವುದೇ ಕಾರಣಕ್ಕೂ ಮಲವಿಸರ್ಜನಾ ನೈಸರ್ಗಿಕ ಪ್ರಚೋದನೆಯನ್ನು ನಿಯಂತ್ರಿಸಬಾರದು. ಇತ್ತೀಚೆಗೆ, ಮಲಬದ್ಧತೆಯು ಬಹುತೇಕ ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ಆದಾಗ್ಯೂ, ಆಧುನಿಕ ಜೀವನಶೈಲಿ, ಅನಾರೋಗ್ಯಕರ ಆಹಾರಗಳಾದ ಜಂಕ್ ಫುಡ್ಸ್, ಅತಿಯಾಗಿ ತಿನ್ನುವುದು, ಧೂಮಪಾನ,  ಮತ್ತು ಆಲ್ಕೊಹಾಲ್ ಇತ್ಯಾದಿಗಳು ಈ ಸಮಸ್ಯೆಗೆ ಕಾರಣವಾಗಿವೆ. ಮಲಬದ್ಧತೆಯಿಂದ ಮನಸ್ಸಿನ ಸ್ಥಿರತೆ  ಕಡಿಮೆಯಾಗುವುದು , ಕಿರಿಕಿರಿ ಉಂಟಾಗುವುದು, ಕೆಲಸದ ಬಗ್ಗೆ ಆಸಕ್ತಿಯ ಕೊರತೆ, ತೂಕ ನಷ್ಟ ಮತ್ತು ಇನ್ನೂ  ಅನೇಕ ತೊಂದರೆಗಳಾಗುತ್ತವೆ . ಮಲಬದ್ಧತೆಯಿಂದ ಗಂಡಸರಲ್ಲಿ ನಿಮಿರು ದೌರ್ಬಲ್ಯ ಸಹ ಕಾಣಿಸಿಕೊಳ್ಳಬಹುದು .

ಮಲಬದ್ಧತೆ ಕೆಲವೊಮ್ಮೆ ಬೇರೇ  ರೋಗದ ಲಕ್ಷಣವಾಗಿಯೂ ಕಾಣಿಸಿಕೊಳ್ಳಬಹುದು . ಗ್ಲೋಬಲ್ ಮಾರ್ಕೆಟಿಂಗ್ ರಿಸರ್ಚ್ ಏಜೆನ್ಸಿ ನಡೆಸಿದ ಪ್ರಸಿದ್ಧ ಸಮೀಕ್ಷೆಯಿಂದ ಭಾರತದ ನಗರ ಜನಸಂಖ್ಯೆಯ ಸುಮಾರು 14 ಪ್ರತಿಶತದಷ್ಟು ಜನರು ದೀರ್ಘಕಾಲದ ಮಲಬದ್ಧತೆಯನ್ನು ಅನುಭವಿಸುತ್ತಿದ್ದಾರೆಂದು ಕಂಡುಬಂದಿದೆ. ಮಲಬದ್ಧತೆಗೆ ಕಾರಣಗಳೇನೆಂಬುದನ್ನು ನೋಡೋಣ .

ಮಲಬದ್ಧತೆಗೆ ಕಾರಣಗಳು – ಆಯುರ್ವೇದ ನೋಟ

  • ಆಯುರ್ವೇದ ಪ್ರಕಾರ ದುರ್ಬಲವಾದ ಅಗ್ನಿ ಮತ್ತು ಅಸಂತುಲಿತ ವಾತ ದೋಶ ( vata dosha ) ಮಲಬದ್ಧತೆಗೆ ಕಾರಣವಾಗುತ್ತವೆ .
  • ಆಹಾರದಲ್ಲಿ ‘ಜಲ ಧಾತು’ ಅಥವಾ ನೀರಿನ ಪ್ರಮಾಣ ಕಡಿಮೆ ಇದ್ದಾಗ,  ಮಲ ಗಟ್ಟಿಯಾಗಿ ಮಲಬದ್ಧತೆಗೆ ಕಾರಣವಾಗಬಹುದು.
  • ಹಲಸಿನ ಕಾಯಿ ( Jack fruit ) ,  ಗಾರ್ಸಿನಿಯಾ,  ಬಾಳೆಕಾಯಿ ( raw banana) ಮುಂತಾದ ಆಹಾರಗಳನ್ನು ಸೇವಿಸಿದಾಗಲೂ ಕೂಡ ಈ ಸಮಸ್ಯೆ ಉಂಟಾಗಬಹುದು .
  • ಹಲವು ರೋಗಗಳಿಗೆ ಬಳಸುವ ಮದ್ದುಗಳಾದ ನೋವು ನಿವಾರಕಗಳು, ಖಿನ್ನತೆ-ಶಮನಕಾರಿಗಳು, ಆಂಟಿಸ್ಪಾಸ್ಮೊಡಿಕ್ಸ್, ಕಬ್ಬಿಣದ ಪೂರಕಗಳು , ಕೆಲವು ಅಂಟಾಸಿಡ್ಗಳು , ಮೂರ್ಛೆ ರೋಗಕ್ಕೆ ಬಳಸುವ , ಪಾರ್ಕಿನ್ಸನ್ ಕಾಯಿಲೆಯ ಔಷಧಗಳು ಇತ್ಯಾದಿ ಸಹ ಈ ತೊಂದರೆಗೆ ಕಾರಣವಾಗಬಹುದು .
  • ಆಹಾರದಲ್ಲಿ ನಾರಿನಂಶದ ಪ್ರಮಾಣ  ಹಾಗು ನೀರಿನ ಪ್ರಮಾಣ ಕಡಿಮೆ ಇದ್ದಾಗಲೂ ಈ ತೊಂದರೆ ತಪ್ಪಿದ್ದಲ್ಲ .
  • ದೈಹಿಕ ವ್ಯಾಯಾಮದ ಕೊರತೆ, ಮಲವಿಸರ್ಜನೆ ಪ್ರಚೋದನೆಯನ್ನು ನಿರ್ಲಕ್ಷಿಸುವುದು , ನಿದ್ರಾಹೀನತೆ ( ಇನ್ಸೋಮ್ನಿಯಾ), ಭೇದಿಯಾಗುವ ಔಷಧಿಗಳ್ ಹೆಚ್ಚು ಬಳಕೆ ಹಾಗು ಪದೇ ಪದೇ ಎನಿಮಾ ತೆಗೆದುಕೊಳ್ಳುವಿಕೆ ಇವೆಲ್ಲವೂ ಈ ತೊಂದರೆಯನ್ನು ಹೆಚ್ಚಿಸುತ್ತವೆ .
  • ಜೀರ್ಣಾಂಗದ ಗೆಡ್ಡೆಗಳು,  ಐಬಿಎಸ್ ( IBS ), ಕೊಲೊನ್ ಪಾಲಿಪ್ಸ್ ಮುಂತಾದ ಜೀರ್ಣಾಂಗ ವ್ಯೂಹದ ಕಾಯಿಲೆಗಳು ಸಹ ಮಲಬದ್ಧತೆ ಉಂಟುಮಾಡಬಹುದು .


ಮಲಬದ್ಧತೆಗೆ  ಉತ್ತಮವಾದ  10  ಆಯುರ್ವೇದ ಮನೆಮದ್ದು

  • ನೀರು
  • ಬೆಚ್ಚಗಿನ ಜೀರಾ ನೀರು
  • ಆಲಿವ್ ಎಣ್ಣೆ
  • ಶುದ್ಧ ತುಪ್ಪ
  • ಕಾಫಿ:
  • ಒಣದ್ರಾಕ್ಷಿ
  • ಬೀನ್ಸ್
  • ಪ್ರೋಬಯಾಟಿಕ್
  • ಗಿಡಮೂಲಿಕೆಗಳು
  • ಇಸಾಬ್ಗೋಲ್
  • ವ್ಯಾಯಾಮ
  • ಬೆಚ್ಚಗಿನ ನೀರು ಮತ್ತು ಅಡಿಗೆ ಸೋಡಾ
  • ಮೆಗ್ನೀಸಿಯಮ್ ಭರಿತ ಆಹಾರಗಳು:

ಮಲಬದ್ಧತೆ  ಸಂಭವಿಸುವ ಮೊದಲು ಅದನ್ನು ಸುಲಭವಾಗಿ ನಿವಾರಿಸಬಹುದು. ಅದರ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗಾಗಿ, ಕೆಳಗೆ ನೀಡಲಾದ ನೈಸರ್ಗಿಕ ಆಯುರ್ವೇದ ಮನೆಮದ್ದುಗಳನ್ನು ಬಳಸುವುದರ ಮೂಲಕ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು .

ನೀರು:

ಉತ್ತಮ  ಜೀರ್ಣಕ್ರಿಯೆ,  ಸ್ನಾಯುಗಳು ಸಲೀಸಾಗಿ  ಕಾರ್ಯ ನಿರ್ವಹಿಸಲು , ದೇಹದ ವಿಷ ವಸ್ತುಗಳನ್ನು ಹೊರಹಾಕಲು ಮತ್ತು ದೇಹದ ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡಲು ನೀರು ( water ) ಅತ್ಯವಶ್ಯಕ. ನಿಮ್ಮ ದೇಹಕ್ಕೆ ಸಾಕಷ್ಟು ನೀರು ಸರಬರಾಜು ಮಾಡಿದಾಗ, ಜೀರ್ಣಾಂಗ ವ್ಯವಸ್ಥೆಯಿಂದ ಪೋಷಕಾಂಶಗಳನ್ನು ಸುಲಭವಾಗಿ ಸಂಸ್ಕರಿಸಬಹುದು ಮತ್ತು ದೇಹದ ತ್ಯಾಜ್ಯಗಳು ಸರಾಗವಾಗಿ ಸರಿಯಾದ ಸ್ಥಾನಕ್ಕೆ ಚಲಿಸಬಹುದು.  ದಿನಕ್ಕೆ 2 ರಿಂದ 3 ಲೀಟರ್ನಿ ನೀರು ಕುಡಿಯುವಂತೆ ತಜ್ಞರು ಶಿಫಾರಸು ಮಾಡಿದ್ದಾರೆ.  ಕರುಳಿನ ಸ್ನಾಯುಗಳು ಸಾಕಷ್ಟು ನೀರಿನ ಉಪಸ್ಥಿತಿಯೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ವಿಷಗಳನ್ನು ಚಲಿಸುವಂತೆ ಮಾಡಿ ಸಲೀಸಾಗಿ ಮಲ ಪ್ರವೃತ್ತವಾಗುವಂತೆ ಮಾಡುತ್ತದೆ .

ಬೆಚ್ಚಗಿನ ಜೀರಿಗೆಯ  ನೀರು ( jeera water )

ಜೀರಿಗೆಯನ್ನು ನೀರಿನೊಂದಿಗೆ  ಕುದಿಸಿ ಸ್ವಲ್ಪ ಬೆಚ್ಚಗಾಗಿಸಿ ಕುಡಿದಾಗ  ಮಲಬದ್ಧತೆಗೆ ಅತ್ಯುತ್ತಮ ಪರಿಹಾರವಾಗಿ ಪರಿಣಮಿಸುತ್ತದೆ. 2 ಟೀ ಚಮಚ ಜೀರಿಗೆಯನ್ನು ಒಂದು  ಲೀಟರ್ ನೀರಿನಲ್ಲಿ ಕುದಿಸಿ. ಈ ನೀರನ್ನು ಥರ್ಮೋಸ್ ಫ್ಲಾಸ್ಕ್ನಲ್ಲಿ ಸಂಗ್ರಹಿಸಿ. 1 ಗ್ಲಾಸ್ ಬೆಚ್ಚಗಿನ ಜೀರಾ ನೀರನ್ನು ಒಂದು ಗಂಟೆಗೆ ಒಮ್ಮೆ ಕುಡಿಯಿರಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ.

ಆಲಿವ್ ಎಣ್ಣೆ:

ಇದು ಪೋಷಕಾಂಶ-ದಟ್ಟವಾದ ಎಣ್ಣೆಯಾಗಿದ್ದು, ಜೀರ್ಣಾಂಗವ್ಯೂಹವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಆಲಿವ್ ಎಣ್ಣೆ ಕರುಳಿನ ಒಳಪದರದಲ್ಲಿ ಜಾರಿಕೆ ಉಂಟುಮಾಡಿ ಮಲವು ಸಲೀಸಾಗಿ ಹೊರಹೋಗುವಂತೆ ಮಾಡುತ್ತದೆ . ಬೆಳಗಿನ  ಉಪಾಹಾರ ತೆಗೆದುಕೊಳ್ಳುವ ಮೊದಲು ಒಂದು ಚಮಚ ಆಲಿವ್ ಎಣ್ಣೆ ಸೇವಿಸಬಹುದು .

ಶುದ್ಧ ತುಪ್ಪ:

ಶುದ್ಧ ತುಪ್ಪ (ತುಪ್ಪದೊಂದಿಗೆ ಆಯುರ್ವೇದ ಮನೆಮದ್ದುಗಳನ್ನು ಓದಿ) ಸಹ ವಿರೇಚಕವಾಗಿ ಕಾರ್ಯನಿರ್ವಹಿಸುತ್ತದೆ. 1 ಟೀ ಚಮಚ ಶುದ್ಧ ತುಪ್ಪವನ್ನು ಒಂದು ಲೋಟ ಬಿಸಿ ನೀರಿನಲ್ಲಿ ಬೆರೆಸಿ. ಮಲಗುವ ಮುನ್ನ ಇದನ್ನು ಕುಡಿಯಿರಿ. ಇದು ಕರುಳನ್ನು ಮೃದುಗೊಳಿಸುತ್ತದೆ ಮತ್ತು ಕರುಳಿನ ಚಲನಶೀಲತೆಯನ್ನು ಹೆಚ್ಚಿಸುತ್ತದೆ.

ಒಣದ್ರಾಕ್ಷಿ

ಇದು  ಮಲಬದ್ಧತೆಗೆ ಬಹಳ  ಪರಿಣಾಮಕಾರಿ ಮನೆ ಮದ್ದು ಎಂದು ಸಾಬೀತಾಗಿದೆ. ಒಣದ್ರಾಕ್ಷಿಗಳಲ್ಲಿ ಹೆಚ್ಚಿನ ನಾರಿನಂಶ  ಮತ್ತು ಸೋರ್ಬಿಟೋಲ್ ಇದ್ದು,  ಕರುಳಿನಲ್ಲಿ ನಿಧಾನವಾಗಿ ಜೀರ್ಣವಾಗುತ್ತದೆ.  ಒಣದ್ರಾಕ್ಷಿ ( dry grapes or raisins) ಮಲಬದ್ಧತೆಯನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ. ಒಂದು ಮುಷ್ಟಿಯಷ್ಟು  ಒಣದ್ರಾಕ್ಷಿಗಳನ್ನು  ರಾತ್ರಿ ನೀರಿನಲ್ಲಿ ನೆನೆಸಿ. ಈ ನೆನೆಸಿದ ಒಣದ್ರಾಕ್ಷಿಗಳನ್ನು ಮುಂಜಾನೆ ತಿನ್ನಿರಿ. ಇದು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಬೀನ್ಸ್: ಅಥವಾ ಕಾಳುಗಳು

ಕಾಳುಗಳು ದೇಹದ ಅಂಗಾಂಶಗಳನ್ನು ಸರಿಪಡಿಸಲು ಮತ್ತು ಬೆಳೆಯಲು, ಪ್ರೋಟೀನ್ ಮತ್ತು ಫೈಬರ್ನಂತಹ ಅನೇಕ ಪೋಷಕಾಂಶಗಳನ್ನು  ಒದಗಿಸುತ್ತವೆ . ಈ ನಾರಿನಂಶದ ಪರಿಣಾಮವಾಗಿ ಮೃದುವಾಗಿ ಮತ್ತು ಮುಕ್ತವಾಗಿ  ಮಲ ಪ್ರವೃತ್ತಿಯಾಗುತ್ತದೆ . ಹುರಳಿ ಕಾಳು ಕರುಳಿನ ಚಲನೆಯನ್ನು ಸರಾಗಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಆದರೆ ಸೋಯಾಬೀನ್ ಅಥವಾ ಸೋಯಾ ( Soybean or Soya ) ಮುಂತಾದ ಕೆಲವು ಕಾಳುಗಳು  ಅಜೀರ್ಣ (Indigestion) ಮತ್ತು ಮಲಬದ್ಧತೆಗೆ ಕಾರಣವಾಗಬಹುದು.

ವ್ಯಾಯಾಮ:

ಸರಳವಾದ ವ್ಯಾಯಾಮವು ಅಜೀರ್ಣ ನಿವಾರಿಸಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಸ್ನಾಯುವಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳಿಂದ ತೋರಿಸಲಾಗಿದೆ. ಪಿಲೇಟ್ಸ್,  ವಾಕಿಂಗ್,  ಮತ್ತು ಯೋಗವು ಕರುಳಿನ ಉದ್ದಕ್ಕೂ ತ್ಯಾಜ್ಯಗಳ ಚಲನೆಯನ್ನು ಸುಗಮವಾಗುವಂತೆ  ಮಾಡಲು  ಸಹಾಯ ಮಾಡುತ್ತದೆ. ಪ್ರತಿದಿನ 45 ನಿಮಿಷಗಳ ಕಾಲ ಚುರುಕಾದ ನಡಿಗೆಯು ( brisk walking ) ಕರುಳಿನ ಚಲನೆಯನ್ನು ಉತ್ತಮವಾಗಿಸಲು  ಸಹಾಯ ಮಾಡುತ್ತದೆ.

ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ

ಉಚಿತ ಆಯುರ್ವೇದ ಸಮಾಲೋಚನೆ

+91 9945995660 / +91 9448433911 ಗೆ ಕರೆ ಮಾಡಿ

ವಾಟ್ಸ್ ಅಪ್ + 91 6360108663 /


Chat with us!
Need help?
Hello!
How can we help you?