ಸೋಂಪು ಕಾಳಿನ ಪ್ರಯೋಜನಗಳು fennel seeds health benefits in kannada


ಆಯುರ್ವೇದವು ಸೋಂಪು ಕಾಳನ್ನು  ತೂಕ ನಷ್ಟ, ಅಜೀರ್ಣ, ಸಿಸ್ಟೈಟಿಸ್, ಜೀರ್ಣ ಶಕ್ತಿ ಸರಿಪಡಿಸಲು ಉಪಯೋಗಿಸುವಂತೆ ಶಿಫಾರಸ್ಸು ಮಾಡುತ್ತದೆ . ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಶ್ವಾಸಕೋಶಗಳನ್ನು  ಬಲಪಡಿಸುತ್ತದೆ.

ವಿಷಯ ಸೂಚಿ

ಆಯುರ್ವೇದದಲ್ಲಿ ಸೋಂಪು ಕಾಳು

ಸೋಂಪಿನ ಆಯುರ್ವೇದ ಆರೋಗ್ಯ ಪ್ರಯೋಜನಗಳು

ಸೋಂಪು ಕಾಳಿನ  ಚಹಾದ ಆರೋಗ್ಯ ಲಾಭಗಳು

Read this article in English Ayurveda Health Benefits of Fennel or Saunf

ಆಯುರ್ವೇದದಲ್ಲಿ ಸೋಂಪು ಕಾಳು

ಫೆನ್ನಿಕುಲಮ್ ವಲ್ಗರೆ ಎಂದೂ ಕರೆಯಲ್ಪಡುವ ಸೋಂಪಿನ ಬೀಜಗಳು ಕ್ಯಾರೆಟ್ ಕುಟುಂಬ ಅಥವಾ ಉಂಬೆಲಿಫೆರೇಗೆ ಸೇರಿವೆ. ಇದು ಹಳದಿ ಹೂವುಗಳು ಮತ್ತು ಗರಿಗಳಿರುವ ಎಲೆಗಳನ್ನು ಹೊಂದಿರುವ ಹೂಬಿಡುವ ಸಸ್ಯವಾಗಿದೆ. ಈ ಸಸ್ಯವು ಸಾಮಾನ್ಯವಾಗಿ ಸಮುದ್ರ ತೀರಕ್ಕೆ ಸಮೀಪವಿರುವ ಒಣ ಭೂಮಿಯಲ್ಲಿ ಬೆಳೆಯುತ್ತದೆ. ಈ ಬೀಜಗಳು ಬಲವಾದ ಪರಿಮಳವನ್ನು ಹೊಂದಿರುತ್ತವೆ ಮತ್ತು ಜಗತ್ತಿನ ಬಹುತೇಕ ಅಡಿಗೆಗಳಲ್ಲಿ ಇದನ್ನು ಬಳಸುತ್ತಾರೆ . ಊಟದ ನಂತರ ಸೋಂಪು ಕಾಳುಗಳನ್ನು  ಜಗಿಯುವುದು ಭಾರತದಲ್ಲಿ ವಾಡಿಕೆ . ಈ  ಬೀಜಗಳು ಅಪಾರ ಔಷಧೀಯ ಗುಣಗಳನ್ನು ಹೊಂದಿವೆ ಮತ್ತು ಮನೆಮದ್ದುಗಳಲ್ಲಿ ಬಳಸಿದಾಗ ಅವು ಪರಿಣಾಮಕಾರಿಯಾಗಿರುತ್ತವೆ.

ಇದನ್ನು ಭಾರತದಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ
ಪಂಜಾಬಿ ಮತ್ತು ಹಿಂದಿ: ಸೌನ್ಫ್
ತಮಿಳು: ಸೌಂಬು
ಬಂಗಾಳಿ: ಮೌರಿ
ಮರಾಠಿ: ಬಡಿ ಶೆಪ್
ಗುಜರಾತಿ: ವರಿಯಾಲಿ
ತೆಲುಗು: ಸೋಪು
ಕನ್ನಡ –  ಸೊಂಪು, ಸೋಂಪುಕಾಳು
ಮಲಯಾಳಂ: ಪೆರುಮ್ ಜೀರಕಂ
ಅರಬ್ಬಿಯನ್: ರಾಜಿಯಾನಜ್
ಫಾರ್ಸಿ ಎನ್: ರಾಜಿಯಾನ್

ಸೋಂಪಿನ  ಕಾಳಿಗೆ ಆಯುರ್ವೇದದಲ್ಲಿ ವಿವಿಧ ಹೆಸರುಗಳಿವೆ. ಇದನ್ನು “ಮಿಶ್ರೇಯಾ”, “ಮಾಧುರಿಕ ಮತ್ತು ಮಧುರಾ” ಎಂದು ಕರೆಯಲಾಗುತ್ತದೆ. ಇವು ರುಚಿಯಲ್ಲಿ ಸಿಹಿ (ಮಧುರ ರಸ), ಸ್ವಲ್ಪ ಖಾರ  (ಕಟು ರಸ) ಮತ್ತು ಕಹಿ (ತಿಕ್ತ ರಸ) ಇರುತ್ತದೆ . ಜೀರ್ಣಕ್ರಿಯೆಯ ನಂತರ ಇದು ಸಿಹಿ ರುಚಿಯನ್ನು ಹೊಂದಿರುತ್ತದೆ. ಇವನ್ನು ಸುಲಭವಾಗಿ ಜೀರ್ಣಿಸಿಕೊಳ್ಳ ಬಹುದು (ಲಘು) ಮತ್ತು ದೇಹದ  ತೇವಾಂಶವನ್ನು  ಹಿಚ್ಚಿಸುತ್ತದೆ (ಸ್ನಿಗ್ಧಾ). ಆದರೆ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.

ಸೋಂಪಿನ ಆಯುರ್ವೇದ ಆರೋಗ್ಯ ಪ್ರಯೋಜನಗಳು

ಇದು ವಾತ ದೋಷ ಮತ್ತು ಕಫ ದೋಷ ಗಳನ್ನು ಸಮತೋಲನಗೊಳಿಸುತ್ತದೆ. ಇದು ಹೃದಯದ ಆರೋಗ್ಯವನ್ನು ರಕ್ಷಿಸುತ್ತದೆ, ಜ್ಞಾಪಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ದೇಹವನ್ನು ತಂಪಾಗಿಸುತ್ತದೆ .

ಸೋಂಪು ದೇಹದ ಅಗ್ನಿ ಅಥವಾ ಪಾಚನಶಕ್ತಿ  ಹೆಚ್ಚಿಸುತ್ತದೆ (ಅಗ್ನಿಕೃತ್ ). ಈ ಬೀಜಗಳು ಹಸಿವನ್ನು ಸಮತೋಲನಗೊಳಿಸಿ, ಜೀರ್ಣಕ್ರಿಯೆಯನ್ನು ಸರಿಪಡಿಸುತ್ತದೆ . ಅಜೀರ್ಣದಿಂದ ಉಂಟಾಗುವ ವಾಯು ಮತ್ತು ಹೊಟ್ಟೆ ಉಬ್ಬರ  ಇವುಗಳಲ್ಲಿ  ಬಹಳ ಉಪಯುಕ್ತವಾಗಿವೆ. ಇದು ಅಜೀರ್ಣ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.

ಸೋಂಪು ಬೀಜಗಳನ್ನು ಅಗಿದಾಗ  ಅವು ವಾಕರಿಕೆ, ವಾಂತಿ ಮತ್ತು ಪ್ರವಾಸದ ಸಮಯದಲ್ಲಿ ಉಂಟಾಗುವ ಹೊಟ್ಟೆ ತೊಳಸು ಇವನ್ನು ತಡೆಯಲು ಸಹಾಯ ಮಾಡುತ್ತದೆ.

ಈ ಬೀಜಗಳು ಕೆಮ್ಮನ್ನು ಶಮನಗೊಳಿಸುತ್ತದೆ ಮತ್ತು ನೆಗಡಿಗೆ ಒಳ್ಳೆಯ ಮನೆ ಮದ್ದು .

ಪಿತ್ತದ ಉಲ್ಬಣದಿಂದ  ಉಂಟಾಗುವ ರಕ್ತಸ್ರಾವದ ಕಾಯಿಲೆಗಳಲ್ಲಿ ಇದು ಬಹಳ ಉಪಯುಕ್ತ .  ಪೈಲ್ಸ್ ಅಥವಾ  ಮೂಲವ್ಯಾಧಿಯಲ್ಲಿ  ತುಂಬಾ ಉಪಯುಕ್ತವಾಗಿದೆ. ಮುಟ್ಟಿನ ದಿನಗಳಲ್ಲಿ ಕಾಲಿನ ಸೆಳೆತವನ್ನು ಹಾಗು ಕೆಳ ಭಾಗದ ಹೊಟ್ಟೆ ನೋವು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.

ಸೋಂಪಿನ ಚಹಾದ ಅಥವಾ ಟೀ ಯ ಆರೋಗ್ಯ ಪ್ರಯೋಜನಗಳು

ಆಯುರ್ವೇದವು  ಸೋಂಪಿನ  ಚಹಾವನ್ನು ತೂಕ ನಷ್ಟ, ಅಜೀರ್ಣ, ಸಿಸ್ಟೈಟಿಸ್, ಹಸಿವಿನ ಕೊರತೆ, ಅಜೀರ್ಣಕ್ಕೆ ಬಳಸುವಂತೆ ಶಿಫಾರಸ್ಸು ಮಾಡುತ್ತದೆ .

ಸ್ವಲ್ಪ ಪುಡಿಮಾಡಿದ ಸೋಂಪಿನ ಬೀಜಗಳನ್ನು  ಬಿಸಿನೀರಿನ ಜೊತೆ ಬೆರೆಸಿ ಚಹಾವನ್ನು ತಯಾರಿಸಲಾಗುತ್ತದೆ. ಈ ಬೀಜಗಳು  ಹೆಚ್ಚಿನ ಪ್ರಮಾಣದ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದರಿಂದ ಇದರ  ಚಹಾವು ಕೂಡ ಆಹ್ಲಾದಕರವಾದ ಪಾನೀಯವಾಗಿದ್ದು , ಸ್ವಾಭಾವಿಕವಾಗಿ ಅನೇಕ ಆರೋಗ್ಯ ಪರಿಸ್ಥಿತಿಗಳು ಮತ್ತು ಸಮಸ್ಯೆಗಳನ್ನು ನಿವಾರಿಸುತ್ತದೆ.

ಅತಿಸಾರ ಮತ್ತು ಭೇದಿಯಾದಾಗ , ಮಿಶ್ರೇಯಾ (ಸೋಂಪು) ಹಸಿವನ್ನು ಹೆಚ್ಚಿಸುತ್ತದೆ  ಮತ್ತು ಜೀರ್ಣಕ್ರಿಯೆಯನ್ನು  ಸರಿಪಡಿಸುತ್ತದೆ . ಈ  ಬೀಜಗಳ ಚಹಾ  ಉದರಶೂಲೆ ಮತ್ತು ಉಬ್ಬರವನ್ನು  ಕಡಿಮೆ ಮಾಡುತ್ತದೆ  .

ಈ ಬೀಜಗಳು ಮಲಬದ್ಧತೆ ಮತ್ತು  ಮೂಲವ್ಯಾಧಿ ಚಿಕಿತ್ಸೆಯಲ್ಲಿ ಬಹಳ ಉಪಯುಕ್ತವಾಗಿವೆ. ಇದರ  ಬೀಜಗಳಿಂದ ತಯಾರಿಸಿದ ಬೆಚ್ಚಗಿನ ಚಹಾವನ್ನು ಕುಡಿಯುವುದರಿಂದ ಕರುಳುಗಳು ಸಲೀಸಾಗಿ ಚಲಿಸಿ ಮಲಭದ್ದತೆ ನಿವಾರಿಸುತ್ತದೆ .

ಸ್ತನ್ಯಪಾನ ಮಾಡಿಸುವ  ತಾಯಂದಿರಿಗೆ ಈ ಚಹಾ ವರದಾನವಾದ ಪಾನೀಯವಾಗಿದೆ. ಇದು ಬಾಣಂತಿಯರಲ್ಲಿ  ಹಾಲು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಸೋಂಪು  ಜನರು ದೇಹದ ತೂಕ ಇಳಿಸಿಕೊಳ್ಳಲು (ದೇಹದ ತೂಕ ಇಳಿಸಲು ಆಯುರ್ವೇದ ಹರ್ಬಲ್ ಟೀಗಳು) ಮತ್ತು ಅವರ ದೇಹದ ಕಲ್ಮಶಗಳನ್ನು  ತೊಡೆಯಲು  ಸಹಾಯ ಮಾಡುತ್ತದೆ. ಇದು  ನೈಸರ್ಗಿಕ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಹಾಗು ಇದನ್ನು ಸೇವಿಸಿದಾಗ ದೇಹದಲ್ಲಿ ಹೆಚ್ಚುವರಿಯಾಗಿ ಸೇರಿದ ನೀರನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಹೆಚ್ಚುವರಿ ನೀರಿನ ನಷ್ಟದ ಮೂಲಕ ದೇಹದ  ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪುರುಷರಲ್ಲಿ ದೇಹದ  ಬೊಜ್ಜು ಹೆಚ್ಚಾದಾಗ  ನಿಮಿರು ದೌರ್ಬಲ್ಯ ಕಾಣಿಸಿಕೊಳ್ಳಬಹುದು . ಹಾಗು ಅತಿಯಾದ ದೇಹದ ತೂಕದಿಂದ ವೀರ್ಯಾಣುಗಳ ಸಂಖ್ಯೆ ಮತ್ತು ಚಲನೆ ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ . ಅಂತಹ ಸಮಯದಲ್ಲಿ ಬೊಜ್ಜು ಕರಗಿಸಲು ಹಾಗು ದೇಹದ ಕಲ್ಮಶ ಹೊರಹಾಕಲು ಸೋಂಪನ್ನು ಬಳಸಬಹುದು.

ಪಿ ಸಿ ಓ ಎಸ್ ಇಂದ ಬಳಲುತ್ತಿರುವ ಮಹಿಳೆಯರಲ್ಲಿ ದೇಹದ ತೂಕ ಹೆಚ್ಚಾಗುತ್ತದೆ . ದೇಹದ ತೂಕ ಕಡಿಮೆ ಮಾಡಿಕೊಳ್ಳುವುದರಿಂದ  ಪಿ ಸಿ ಓ ಎಸ್ ಸಹ ಕಡಿಮೆಯಾಗುತ್ತದೆ . ಇಂತಹ ಸಮಯದಲ್ಲಿ ಸೋಂಪು ಕಾಳಿನ ಚಹಾವನ್ನು ತೂಕ ಕಡಿಮೆ ಮಾಡಲು ಬಳಸಬಹುದು .

( ಆಯುರ್ವೇದ ಚಿಕಿತ್ಸೆಗಳು ಮತ್ತು ಪರಿಹಾರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ವಾಟ್ಸ್ ಆ್ಯಪ್ ಡಾ.ಸವಿತಾ ಸೂರಿ @ + 91 6360108663 / )

ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ

ಉಚಿತ ಆಯುರ್ವೇದ ಸಮಾಲೋಚನೆ

+91 9945995660 / +91 9448433911 ಗೆ ಕರೆ ಮಾಡಿ

ವಾಟ್ಸ್ ಅಪ್ + 91 6360108663 /


Chat with us!
Need help?
Hello!
How can we help you?