ಹುರುಳಿಕಾಳು – ಔಷಧೀಯ ಉಪಯೋಗ – horse gram in kannada


ತೂಕ ನಷ್ಟ ಮಾಡುವಲ್ಲಿ ,ಮಧುಮೇಹ ಅಥವಾ ಡಯಾಬಿಟಿಸ್ ಹಿಡಿತದಲ್ಲಿಡುವಲ್ಲಿ, ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುವಲ್ಲಿ , ನಿಮಿರು ದೌರ್ಬಲ್ಯ , ಶೀಘ್ರ ಸ್ಖಲನ, ಪಿಸಿಓಎಸ್ ಅಥವಾ ಪಿಸಿಒಡಿ ( PCOS / PCOD ) ಮತ್ತು ಕಫ ಸಂಬಂಧಿತ ಕಾಯಿಲೆಗಳಲ್ಲಿ ಬಹಳ ಉಪಯುಕ್ತ .

ಆಯುರ್ವೇದದಲ್ಲಿ ಹುರಳಿ ಕಾಳು

ಹುರಳಿ ಕಾಳು (ಬೊಟಾನಿಕಲ್ ಹೆಸರು – ಮ್ಯಾಕ್ರೊಟಿಲೋಮಾ ಯೂನಿಫ್ಲೋರಮ್) ಅನ್ನು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ . ಇದನ್ನು ಸಾರು, ಉಸಲಿ , ಚಟ್ನಿ ಪುಡಿ , ಹಪ್ಪಳ ಇತ್ಯಾದಿ ಖಾದ್ಯ ವಸ್ತು ತಯಾರಿಸಲು ಉಪಯೋಗಿಸುತ್ತಾರೆ. ಆಯುರ್ವೇದದ ಪಠ್ಯಗಳು ಈ ಕಾಳನ್ನು ಕುಲತ್ಥ ಎಂದು ಉಲ್ಲೇಖಿಸುತ್ತವೆ. ಈ ಕಾಳಿನ ಖಾದ್ಯವನ್ನು ಪಂಚಕರ್ಮ ಚಿಕಿತ್ಸೆಯ ನಂತರ ಆಹಾರದಲ್ಲಿ ಬಳಸಲಾಗುತ್ತದೆ.

ಹುರಳಿಯ ಔಷಧೀಯ ಗುಣಗಳು ಮತ್ತು ಉಪಯೋಗ

ಆಯುರ್ವೇದವು ಹುರಳಿಯನ್ನು ಅನೇಕ ರೋಗಗಳಲ್ಲಿ ಬಳಸಲು ಆದೇಶಿಸುತ್ತದೆ

ಪುರುಷರಿಗೆ ಉಪಯೋಗವಾಗುವ ಸಂಧರ್ಭಗಳು

ಈ ಹುರುಳಿ ವಿವಿಧ ಪುರುಷರ ಆರೋಗ್ಯ ಸ್ಥಿತಿಗಳಲ್ಲಿ ಬಹಳ ಉಪಯುಕ್ತವಾಗಿದೆ. ಪುರುಷರು ನಿಯಮಿತವಾಗಿ ತಮ್ಮ ಆಹಾರದಲ್ಲಿ ಕುಲತ್ಥ ಪಾಕವಿಧಾನಗಳನ್ನು ಸೇರಿಸಿಕೊಳ್ಳಬಹುದು. ಇದರಿಂದ ಪುರುಷರಿಗಾಗುವ ಪ್ರಯೋಜನಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ನಿಮಿರು ದೌರ್ಬಲ್ಯಕ್ಕೆ ಹುರಳಿ

ಹುರಳಿ ದೇಹದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ . ಇದರಿಂದ ಇದು ಮಧುಮೇಹ ಮತ್ತು ಹೆಚ್ಚಿದ ಬೊಜ್ಜಿನ ಕಾರಣದಿಂದ ಉಂಟಾಗುವ ನಿಮಿರು ದೌರ್ಬಲ್ಯದಿಂದ ಬಳಲುತ್ತಿರುವ ಪುರುಷರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಸಾಮಾನ್ಯ ಲೈಂಗಿಕ ಕ್ರಿಯೆಗೆ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸುತ್ತದೆ. ಈ ಹುರುಳಿಯನ್ನು ವಾಜೀಕರಣ ಆಹಾರವಾಗಿ ಆಹಾರದಲ್ಲಿ ಸೇರಿಸಬಹುದು

ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವಲ್ಲಿ

ಕಡಿಮೆ ವೀರ್ಯಾಣುಗಳ ಸಂಖ್ಯೆ ಅಥವಾ ಒಲಿಗೋಸ್ಪೆರ್ಮಿಯಾ ಇರುವಾಗ ಈ ದ್ವಿದಳ ಧಾನ್ಯವು ಖನಿಜಗಳು ಮತ್ತು ಪ್ರೋಟೀನ್‌ಗಳನ್ನು ಯಥೇಚ್ಛವಾಗಿ ಪೂರೈಸಿ ವೀರ್ಯಾಣುಗಳಿಗೆ ಅತ್ಯುತ್ತಮವಾದ ಪೋಷಣೆಯನ್ನು ನೀಡುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಮತ್ತು ಅಮೈನೋ ಆಸಿಡ್ಗಳು ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಆಯುರ್ವೇದ ಆಚಾರ್ಯರು ಈ ಹುರುಳಿಯನ್ನು ವೀರ್ಯದ ದ್ರವೀಕರಣದ ಸಮಯವನ್ನು ಕಡಿಮೆ ಮಾಡಲು ಮತ್ತು ಅದರಿಂದ ಕಲ್ಮಶಗಳನ್ನು ತೆಗೆದುಹಾಕಲು ಶಿಫಾರಸು ಮಾಡುತ್ತಾರೆ.

ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಈ ಕಾಳುಗಳಲ್ಲಿ ಪ್ರೋಟೀನ್ ಸಮೃದ್ಧವಾಗಿರುವ ಕಾರಣ, ಮೊಳಕೆಯೊಡೆದ ಹುರಳಿ, ಸ್ನಾಯುಗಳನ್ನು ಮತ್ತು ದೇಹದ ಶಕ್ತಿಯನ್ನು ಬಲಪಡಿಸಲು ಇಚ್ಛಿಸುವ ಪುರುಷರಿಗೆ ಅತ್ಯುತ್ತಮ ಆಹಾರವಾಗಿದೆ.

ದೇಹದ ತೂಕ ಕಡಿಮೆ ಮಾಡಲು ಹುರಳಿ :

ಆಯುರ್ವೇದದ ಆಚಾರ್ಯರು ಹುರಳಿಯು ದೇಹದ ಕೊಬ್ಬಿನಂಶವನ್ನು ಕಡಿಮೆ ಮಾಡುವ ಅತ್ಯುತ್ತಮ ದ್ರವ್ಯ ಎಂದು ಶ್ಲಾಘಿಸುತ್ತಾರೆ . ಇದು ಸ್ಥೂಲಕಾಯಕ್ಕೆ ಮೂಲ ಕಾರಣಗಳಾದ ಮೇಧಾ ಧಾತು (ದೇಹದ ಕೊಬ್ಬು) ಮತ್ತು ಕಫ ದೋಶವನ್ನು ಕಡಿಮೆ ಮಾಡುತ್ತದೆ . ಇದರಲ್ಲಿ ಪ್ರೋಟೀನ್ ಅಂಶ ಹೆಚ್ಚಿರುವುದರಿಂದ ಶೀಘ್ರವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಪ್ರಸವದ ನಂತರ ತೂಕ ಕಡಿಮೆ ಮಾಡಿಕೊಳ್ಳಲು ಉಪಯೋಗಿಸಬಹುದು

ಪಿಸಿಓಎಸ್ (PCOS or PCOD) ಮತ್ತು ಮುಟ್ಟಿನ ಅಡಚಣೆಗಳಲ್ಲಿ

ಅಲ್ಪ ಪ್ರಮಾಣದ ರಕ್ತಸ್ರಾವ ಅಥವಾ ಅನಿಯಮಿತ ಮುಟ್ಟಿನ ಚಕ್ರದಿಂದ ಬಳಲುತ್ತಿರುವ ಮಹಿಳೆಯರಿಗೆ ಹುರಳಿ ಬಹಳ ಉಪಯುಕ್ತ . ಇದರ ಕಬ್ಬಿಣದ ಅಂಶವು ಮುಟ್ಟಿನ ಚಕ್ರಗಳಿಂದ ನಷ್ಟವಾಗುವ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ತೂಕ ನಿರ್ವಹಣೆಯನ್ನು ಮಾಡಲು ಇದು ಸಹಾಯ ಮಾಡುವುದರಿಂದ, ಇದನ್ನು ಪಿಸಿಓಎಸ್ / ಪಿಸಿಒಡಿ ಆಯುರ್ವೇದ ಡಯಟ್‌ನಲ್ಲಿ ಶಿಫಾರಸು ಮಾಡಲಾಗುತ್ತದೆ .(PCOS or PCOD ayurvedic Diet)

ಮಧುಮೇಹ ಅಥವಾ ಡಯಾಬಿಟೀಸ್ ನಲ್ಲಿ :

ಹೊಸ ಸಂಶೋಧನೆಗಳು ಮಧುಮೇಹದಲ್ಲಿ (diabetes) ಈ ಕಾಳಿನ ಪ್ರಯೋಜನಕಾರಿ ಪರಿಣಾಮಗಳನ್ನು ತೋರಿಸಿವೆ . ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಅಥವಾ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಾಮಾನ್ಯ ಶೀತ ಮತ್ತು ಜ್ವರದಲ್ಲಿ

ಸಾಮಾನ್ಯ ಶೀತ, ಜ್ವರ, ಬ್ರಾಂಕೈಟಿಸ್ ಮತ್ತು ಆಸ್ತಮಾದಲ್ಲಿ ಆಯುರ್ವೇದ ಆಚಾರ್ಯರು ಹುರುಳಿ ಕಟ್ಟು ಅಥವಾ ಸೂಪ್ ಅನ್ನು ಶಿಫಾರಸು ಮಾಡುತ್ತಾರೆ. ಇದು ಕಫ ದಟ್ಟಣೆಯನ್ನು ನಿವಾರಿಸುತ್ತದೆ ಮತ್ತು ಉಸಿರಾಟವನ್ನು ಸುಲಭಗೊಳಿಸುತ್ತದೆ. ಜ್ವರ ಮತ್ತು ನೆಗಡಿಯಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಅಗತ್ಯವಾದ ಪೋಷಕಾಂಶಗಳನ್ನು ಪೂರೈಸುತ್ತದೆ

ಮಲಬದ್ಧತೆ

ಹುರುಳಿಯಲ್ಲಿರುವ ನಾರಿನಂಶವು ಮಲಬದ್ಧತೆಯನ್ನು  ( constipation ) ನಿವಾರಿಸಲು ಮತ್ತು ಕರುಳಿನ ಚಲನೆಯನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ.

ಮೂತ್ರಪಿಂಡದ ಕಲ್ಲುಗಳು

ಬೇಯಿಸಿದ ಹುರಳಿಯನ್ನು ಹಾಗು ಹುರಳಿ ಕಟ್ಟು ನಿಯಮಿತವಾಗಿ ಸೇವಿಸುವುದರಿಂದ ಮೂತ್ರ ಪಿಂಡದ ಸಣ್ಣ ಸಣ್ಣ ಕಲ್ಲುಗಳು ಹೊರಬೀಳುತ್ತವೆ ಅಲ್ಲದೆ ಮೂತ್ರಪಿಂಡಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳ ರಚನೆಯನ್ನು ಹುರುಳಿ ತಡೆಯುತ್ತದೆ ಎಂದು ವೈಜ್ಞಾನಿಕ ಅಧ್ಯಯನಗಳು ತೋರಿಸಿವೆ.

ಜೀರ್ಣಕ್ರಿಯೆಯಲ್ಲಿ

ಇದು ವಾಯುವನ್ನು ಅಥವಾ ವಾತ ದೋಷವನ್ನು ಕಡಿಮೆ ಮಾಡುತ್ತದೆ ಮತ್ತು ಅಜೀರ್ಣವನ್ನು ಕಡಿಮೆ ಮಾಡುತ್ತದೆ. ಕರುಳಿನ ಪರಾವಲಂಬಿ ಕ್ರಿಮಿಗಳನ್ನು ನಿರ್ಮೂಲನೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.

ಆನ್ಲೈನ್ ನಲ್ಲಿ ಲಭ್ಯವಿರುವ ಉತ್ತಮ ಹುರುಳಿಕಾಳುಗಳು

ಬೇರೆ ಭಾರತೀಯ ಭಾಷೆಗಳಲ್ಲಿ ಹುರಳಿಕಾಳಿನ ಹೆಸರು

ಕನ್ನಡದಲ್ಲಿ – ಹುರಳಿ ಕಾಳು
ಹಿಂದಿಯಲ್ಲಿ – ಕುಲತಿ
ಮರಾಠಿಯಲ್ಲಿ – ಕುಲ್ಲಿತ್
ತೆಲಗುವಿನಲ್ಲಿ – ಉಲವಾಲು
ತಮಿಳಿನಲ್ಲಿ – ಕೊಲ್ಲು

ಹುರಳಿಯನ್ನು ಬಳಸುವುದು ಹೇಗೆ ?

ಹುರಳಿಯನ್ನು ರಾತ್ರಿಯಿಡೀ ನೆನೆಸಬೇಕು ಮತ್ತು ಆ ನೀರನ್ನು ತ್ಯಜಿಸಬೇಕು. ಮತ್ತೆ ಬೇರೆ ನೀರು ಹಾಕಿ ನೆನೆಸಿದ ಕಾಳನ್ನು ಬೇಯಿಸಿ ಸಾರು, ಉಸಲಿ ಮತ್ತು ಸೂಪ್‌ಗಳಲ್ಲಿ ಬಳಸಬೇಕು

ಎಚ್ಚರಿಕೆ:

ಅಡುಗೆ ಮಾಡುವ ಮೊದಲು ಯಾವಾಗಲೂ ಹುರುಳಿಯನ್ನು ರಾತ್ರಿಯಿಡೀ ನೆನೆಸಿಡಿ.
ಜೀರ್ಣಕ್ರಿಯೆಗೆ ತೊಂದರೆಯಾಗುವ ಫೈಟೊ ರಾಸಾಯನಿಕಗಳನ್ನು ಒಳಗೊಂಡಿರುವ ಕಾರಣ ನೆನೆಸಿದ ನೀರನ್ನು ತ್ಯಜಿಸಿ.
ಬೇಯಿಸಿದ ಕಾಳನ್ನು ಮಾತ್ರ ಬಳಸಿ. ಜೀರ್ಣಿಸಿಕೊಳ್ಳಲು ತುಂಬಾ ಕಷ್ಟವಾದ್ದರಿಂದ ಅದನ್ನು ಎಂದಿಗೂ ಕಚ್ಚಾ ತಿನ್ನಬೇಡಿ.
ಗೌಟ್ ಅಥವಾ ಅಧಿಕ ರಕ್ತದ ಯೂರಿಕ್ ಆಸಿಡ್ , ಮಧುಮೇಹದಿಂದ ಮೂತ್ರಪಿಂಡದ ತೊಂದರೆಗಳು ಇರುವವರಿಗೆ ಇದನ್ನು ಶಿಫಾರಸು ಮಾಡುವುದಿಲ್ಲ.

ಹುರಳಿಯನ್ನು ಯಾರು ಬಳಸಬಾರದು ?

ಗರ್ಭಿಣಿಯರು, ಕ್ಷಯರೋಗದಿಂದ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಗಳು, ತೂಕ ಹೆಚ್ಚಿಸಲು ಸಿದ್ಧರಿರುವ ಜನರು ಇದನ್ನು ಬಳಸಬಾರದು. ಗೌಟ್ ಮತ್ತು ಹೆಚ್ಚಿನ ಯೂರಿಕ್ ಆಸಿಡ್ ಮಟ್ಟ (Increased Uric Acid Level) ಹೊಂದಿರುವ ವ್ಯಕ್ತಿಗಳು, ಮೂತ್ರಪಿಂಡದ ಅಸಮರ್ಪಕ ಕ್ರಿಯೆ ಉಳ್ಳವರು ಈ ದ್ವಿದಳ ಧಾನ್ಯವನ್ನು ಬಳಸಬಾರದು

ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ

ಉಚಿತ ಆಯುರ್ವೇದ ಸಮಾಲೋಚನೆ

+91 9945995660 / +91 9448433911 ಗೆ ಕರೆ ಮಾಡಿ

ವಾಟ್ಸ್ ಅಪ್ + 91 6360108663 /


Chat with us!
Need help?
Hello!
How can we help you?