ಆಯುರ್ವೇದದ ಪ್ರಕಾರ ಕೇಸರಿಯ ಉಪಯೋಗಗಳೇನು ? Uses of Kesari / Saffron


ಆಯುರ್ವೇದದ ಪ್ರಕಾರ ಕೇಸರಿಯ ಉಪಯೋಗಗಳೇನು ?

Read this article in english Health Benefits of Saffron or Kesar or Crocus Sativus – An Ayurveda View

ಆಯುರ್ವೇದವು ಮೆಲಾಸ್ಮ, ಚರ್ಮದ  ವಿವರ್ಣತೆ , ಕಲೆಗಳು , ಮೊಡವೆ , ಕಣ್ಣಿನ ಸುತ್ತ ಕಪ್ಪು ವಲಯಗಳು ಮುಂತಾದ ಚರ್ಮದ ತೊಂದರೆಗಳಿಗೆ ಕೇಸರಿಯನ್ನು ಆಯುರ್ವೇದದಲ್ಲಿ ಶಿಫಾರಸ್ಸು ಮಾಡಲಾಗುತ್ತದೆ .  ಚರ್ಮದ ವರ್ಣ ತಿಳಿಯಾಗಿಸಲು ಮತ್ತು ಸುರಕ್ಷಿತ ಗರ್ಭಧಾರಣೆಗೂ ಸಹ ಕೇಸರಿಯನ್ನು ಬಳಸಲು ಹೇಳಲಾಗಿದೆ .

ಆಯುರ್ವೇದದಲ್ಲಿ ಕೇಸರಿ ಅಥವಾ saffron

ಆಯುರ್ವೇದದ ಪಠ್ಯಗಳಲ್ಲಿ ಸ್ಯಾಫ್ರನ್ ಅಥವಾ ಕೇಸರಿಗೆ “ಕುಂಕುಮ” ಎಂದು ಕರೆಯುತ್ತಾರೆ . ಆಯುರ್ವೇದ ಆಚಾರ್ಯರು ಇದನ್ನು “ವರ್ಣ್ಯ ಗಣ ” ದಲ್ಲಿ ವರ್ಗೀಕರಿಸಿದ್ದಾರೆ . “ವರ್ಣ್ಯ” ಎಂದರೆ ಚರ್ಮಕ್ಕೆ ಉತ್ತಮ ಬಣ್ಣ ಹಾಗು ಹೊಳಪನ್ನು ನೀಡಿ ಚರ್ಮದ ಅರೋಗ್ಯ ಕಾಪಾಡುವುದು .

ಆಯುರ್ವೇದ, ಯುನಾನಿ ಮತ್ತು ಚೀನೀ ಔಷಧೀಯ ಸಿದ್ಧತೆಗಳಲ್ಲಿ ಬಳಸಲಾಗುವ ದುಬಾರಿ ಮಸಾಲೆಗಳಲ್ಲಿ ಕೇಸರಿ ಒಂದು. ಇದನ್ನು ಯುರೋಪಿಯನ್, ಉತ್ತರ ಆಫ್ರಿಕನ್ ಮತ್ತು ಏಷ್ಯನ್ ಪಾಕಪದ್ಧತಿಗಳಲ್ಲಿ ಮಸಾಲೆ ಮತ್ತು ಆಹಾರಕ್ಕೆ ಆಕರ್ಷಕ ಬಣ್ಣ ಮತ್ತು ಸುವಾಸನೆ ನೀಡಲು ವ್ಯಾಪಕವಾಗಿ ಬಳಸಲಾಗುತ್ತದೆ. ಈ ಸಸ್ಯದ ಮೂಲ ಮತ್ತು ಕೃಷಿ ಮಧ್ಯ ಏಷ್ಯಾದ ಪ್ರದೇಶದಲ್ಲಿ 3000 ವರ್ಷಗಳಷ್ಟು ಹಿಂದೆಯೇ ಇತ್ತು ಎಂದು ಇತಿಹಾಸ ಹೇಳುತ್ತದೆ  .

ಕೇಸರಿ ಸಸ್ಯವು ಹೂಬಿಡುವ ದೀರ್ಘಕಾಲಿಕ ಸಸ್ಯವಾಗಿದೆ. ಈ ಸಸ್ಯದ ನೇರಳೆ ಬಣ್ಣದ ಹೂವು ಮೂರು ಕೇಸರಗಳನ್ನು ಹೊಂದಿದೆ. ಒಣಗಿದ ಈ ಕೇಸರಗಳನ್ನು ಅಡುಗೆ, ಔಷಧಿ ಮತ್ತು ಸೌಂದರ್ಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.

ಕೇಸರಿಯ ಆಯುರ್ವೇದ ಔಷಧೀಯ ಗುಣಗಳು, ಪ್ರಯೋಜನಗಳು ಮತ್ತು ಉಪಯೋಗಗಳು

ಆಯುರ್ವೇದದ ಪಠ್ಯಗಳು ಈ ಅಮೂಲ್ಯ ಸಸ್ಯದ ಔಷಧೀಯ ಗುಣಗಳನ್ನು ಈ ಕೆಳಗಿನಂತೆ ವಿವರಿಸುತ್ತವೆ .

ಆಚಾರ್ಯ ಭಾವ ಪ್ರಕಾಶ ರ ಪ್ರಕಾರ ಕೇಸರಿ,   ಇದು ಅಂಗಾಂಶಗಳ ಮೃದುತ್ವ  ಹೆಚ್ಚಿಸುತ್ತದೆ, ತ್ರಿದೋಷಗಳನ್ನು ಸಮತೋಲನಗೊಳಿಸುತ್ತದೆ ಹಾಗು ದೇಹದ ಉಷ್ಣತೆ ಹೆಚ್ಚಿಸುತ್ತದೆ (ಉಷ್ಣ ವೀರ್ಯ )

ಆಯುರ್ವೇದ ಆಚಾರ್ಯರು ತಲೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಲು ಕೇಸರಿಯನ್ನು ಶಿಫಾರಸು ಮಾಡುತ್ತಾರೆ. ಚರ್ಮದ ಗಾಯಗಳನ್ನು ಗುಣಪಡಿಸುವ ಇದರ ಗುಣಲಕ್ಷಣಗಳು ಆಯುರ್ವೇದದ ಪ್ರಾಚೀನ ಗ್ರಂಥಗಳಲ್ಲಿ ಹೆಚ್ಚು ಪ್ರಶಂಸಿಸಲ್ಪಟ್ಟಿವೆ. ಕೇಸರಿಯನ್ನು ಅನೇಕ ಕಾಯಿಲೆಗಳಿಗೆ ಔಷಧವಾಗಿ ಯುಗದಿಂದ ಬಳಸಲಾಗುತ್ತದೆ. ಕೇಸರಿಯ ಪ್ರಮುಖ ಉಪಯೋಗಗಳು ಇಲ್ಲಿವೆ.

ಚರ್ಮದ ತೊಂದರೆಗಳಿಗೆ ಕೇಸರಿ

ಇದು ಚರ್ಮದ ಕಲೆಗಳನ್ನು ,  ಕಣ್ಣುಗಳ ಕೆಳಗೆ ಕಪ್ಪು ವಲಯಗಳನ್ನು , ಮೊಡವೆ ಮತ್ತು ಗುಳ್ಳೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ . ಇದು ಚರ್ಮದ ವರ್ಣ ಮತ್ತು ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಈ ಅಮೂಲ್ಯ ಮೂಲಿಕೆ  ಆಯುರ್ವೇದ  ಫೇಸ್ ಪ್ಯಾಕ್‌ಗಳಲ್ಲಿ  , ಚರ್ಮದ ವರ್ಣ ತಿಳಿಮಾಡುವ ಕ್ರೀಮ್‌ಗಳು ಮತ್ತು ದೇಹದ ಚರ್ಮಕ್ಕೆ ಉಪಯೋಗಿಸುವ  ಎಣ್ಣೆಗಳಲ್ಲಿ ಬಳಸಲಾಗುತ್ತದೆ. ಕುಂಕುಮಾದಿ ತೈಲ (ಎಣ್ಣೆ ) ಇಂತಹ  ಆಯುರ್ವೇದ ತಯಾರಿಕೆಯಾಗಿದ್ದು, ಇದನ್ನು ಯುಗಗಳಿಂದ ಸೌಂದರ್ಯ ಪ್ರಸಾದನವಾಗಿ  ಬಳಸಲಾಗುತ್ತದೆ.

5 ಉತ್ತಮ ಕುಂಕುಮಾದಿ ತೈಲ ಆನ್ ಲೈನ್ ನಲ್ಲಿ ಲಭ್ಯ

ಪುರುಷರ ನಿಮಿರು ದೌರ್ಬಲ್ಯ ಮತ್ತು ಕಡಿಮೆ ವೀರ್ಯಾಣುಗಳಿರುವಲ್ಲಿ ಕೇಸರಿಯ ಉಪಯುಕ್ತತೆ

ಈ ಮೂಲಿಕೆಯನ್ನು ಆಯುರ್ವೇದದಲ್ಲಿ ವಾಜೀಕರ ಎಂದು ಹೊಗಳಿದ್ದಾರೆ . ಲೈಂಗಿಕ ಶಕ್ತಿ  ಹೆಚ್ಚಿಸಲು ಮತ್ತು ಪುರುಷ ಬಂಜೆತನಕ್ಕೆ ಚಿಕಿತ್ಸೆ ನೀಡಲು ಆಯುರ್ವೇದ ವಾಜಿಕರಣ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ .

ಕೇಸರಿ ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುತ್ತದೆ. ಈ ಗುಣದಿಂದ  ಆಯುರ್ವೇದದಲ್ಲಿ ಕೇಸರಿಯನ್ನು ನಿಮಿರು ದೌರ್ಬಲ್ಯ , ಶೀಘ್ರ  ಸ್ಖಲನ , ವೀರ್ಯಾಣುಗಳ ಸಂಖ್ಯೆ ಮತ್ತು  ಚಲನಶೀಲತೆ ಕಡಿಮೆ ಇರುವಿಕೆ ಮುಂತಾದ ಪರಿಸ್ಥಿತಿಗಳಲ್ಲಿ  ಚಿಕಿತ್ಸೆ ನೀಡಲು ಬಳಸಲಾಗುತ್ತದೆ .

ಪುರುಷರು,  ಲೈಂಗಿಕ ಶಕ್ತಿ  ಹೆಚ್ಚಿಸುವ ಇತರ  ಗಿಡಮೂಲಿಕೆಗಳ ಜೊತೆಗೆ ಕೇಸರಿಯನ್ನು  ಬಳಸಬಹುದು.  ಅಶ್ವಗಂಧ , ಕಪಿಕಚ್ಚು , ಗೋಕ್ಷುರಾ , ವಿದಾರಿಕಂದ ,  ಬಿಳಿಮುಸ್ಲಿ , ಕಪ್ಪು ಮುಸ್ಲಿ , ಕೋಕಿಲಾಕ್ಷ ,  ಇತ್ಯಾದಿ ಮೂಲಿಕೆಗಳೊಡನೆ ಪ್ರಮಾಣಭದ್ದವಾಗಿ ಹಾಲಿನೊಡನೆ ಸಂಸ್ಕರಿಸಿ ಉಪಯೋಗಿಸಬಹುದು . ಹೀಗೆ ಹಾಲಿನೊಡನೆ ಸಂಸ್ಕರಿಸಿದ ಕೇಸರಿ  ಹಾಗೂ ಇತರ ಮೂಲಿಕೆಗಳು ಪುರುಷರ ವೀರ್ಯಾಣುಗಳ ಸಂಖ್ಯೆ ಮತ್ತು ಚಲನಶೀಲತೆಯನ್ನು ಹೆಚ್ಚಿಸುತ್ತವೆ . ಈ ಹಾಲಿಗೆ ಆಯುರ್ವೇದದಲ್ಲಿ “ವೃಷ್ಯ ಕ್ಷೀರ” ಎನ್ನುತ್ತಾರೆ .

ಗರ್ಭಾವಸ್ಥೆಯಲ್ಲಿ ಕೇಸರಿ ಬಳಸುವ ಬಗ್ಗೆ 

ಪ್ರಸವವು ಸುಲಭವಾಗಿ ಆಗಲು ಕೇಸರಿಯನ್ನು ಗರ್ಭಿಣಿಯರು ಬಳಸುವಂತೆ ಆಯುರ್ವೇದದಲ್ಲಿ ಸಲಹೆ ನೀಡಲಾಗಿದೆ . ಇದು ಪ್ರಸವದ ನಂತರ ಗರ್ಭಾಶಯವು ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ . ಪ್ರಸವದ ನಂತರ ಉಂಟಾಗುವ ರಕ್ತಸ್ರಾವವನ್ನು ಕಡಿಮೆ ಮಾಡಲು ಸಹಕರಿಸುತ್ತದೆ .  ಪ್ರಸವದ ನಂತರ ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ

ಗರ್ಭಾವಸ್ಥೆಯ ಯಾವ  ತಿಂಗಳಲ್ಲಿ  ಕೇಸರಿಯನ್ನು ಬಳಸಬೇಕು ?

ಕೇಸರಿ ಉಷ್ಣ ಗುಣವನ್ನು ಹೊಂದಿರುವುದರಿಂದ ೬ ತಿಂಗಳುಗಳಾಗುವವರೆಗೂ ಗರ್ಭಿಣಿಯರು ಇದನ್ನು  ಉಪಯೋಗಿಸಬಾರದು .  (6 ತಿಂಗಳು ಪೂರ್ಣಗೊಳ್ಳುವವರೆಗೆ ಇದನ್ನು ಬಳಸಬೇಡಿ). ಇದನ್ನು ಯಾವಾಗಲೂ ಗರ್ಭಧಾರಣೆಯ 7 ನೇ ತಿಂಗಳಿನಿಂದ ಬಳಸಿ.

ಗರ್ಭಾವಸ್ಥೆಯಲ್ಲಿ ಕೇಸರಿಯನ್ನು ಬಳಸುವುದು ಹೇಗೆ ?

1 ಕಪ್ ಕಾಯಿಸಿದ ಹಾಲಿನಲ್ಲಿ 3 ರಿಂದ 4 ಕೇಸರಿ ಎಳೆಗಳನ್ನು ಹಾಗು ಕಲ್ಲುಸಕ್ಕರೆಯನ್ನು ಮಿಶ್ರಣ ಮಾಡಿ ಮತ್ತು ರಾತ್ರಿ ಮುಚ್ಚಿಡಿ .  ಬೆಳಿಗ್ಗೆ ಎದ್ದ ತಕ್ಷಣ ಈ ಹಾಲನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಗರ್ಭಿಣಿಯರಿಗೆ ಉತ್ತಮವಾದ ಕೇಸರಿ

ಮಹಿಳೆಯರ ಮುಟ್ಟಿನ ಸಮಸ್ಯೆಗಳಿಗೆ ಕೇಸರಿ

ಈ ಮೂಲಿಕೆ ಮುಟ್ಟಿನ  ಸಮಯದಲ್ಲಿ ನೋವಿನಿಂದ ಕೂಡಿದ ರಕ್ತಸ್ರಾವದಲ್ಲಿ , ನೋವು  ಕಡಿಮೆಯಾಗುವಂತೆ  ಹಾಗು ಸ್ರಾವವು ಸಲೀಸಾಗಿ ಆಗುವಂತೆ ಮಾಡುತ್ತದೆ . ಮುಟ್ಟಿನ ಸಮಯದಲ್ಲಿ ಉಂಟಾಗುವ ಹೊಟ್ಟೆ ನೋವನ್ನು ನಿವಾರಿಸುತ್ತದೆ . ಇದು ದೇಹದ ಉಷ್ಣತೆಯನ್ನು ಹೆಚ್ಚಿಸುವುದರಿಂದ ಶರೀರದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ .

ಪಿ. ಸಿ. ಓ. ಎಸ್ ಅಥವಾ ಪಿ. ಸಿ. ಒ. ಡಿ. ಯಲ್ಲಿ ಮುಟ್ಟಿನ ಚಕ್ರವನ್ನು ಕ್ರಮಬದ್ಧಗೊಳಿಸಲು ಸಹ ಸಹಾಯ ಮಾಡುತ್ತದೆ.

ನರಮಂಡಲದ ಕಾಯಿಲೆಗಳಲ್ಲಿ:

ಕೇಂದ್ರ ನರಮಂಡಲದ ಕಾಯಿಲೆಗಳಿಗೆ ಆಯುರ್ವೇದ ಔಷಧಿಗಳಲ್ಲಿ ಕೇಸರಿಯನ್ನು ಸಕ್ರಿಯ ಘಟಕಾಂಶವಾಗಿ ಬಳಸಲಾಗುತ್ತದೆ.

ಸಂಧಿವಾತದಲ್ಲಿ:

ಇದು ವಾತವನ್ನು ಸಮತೋಲನಗೊಳಿಸುವುದರಿಂದ, ಇದು ರುಮಟಾಯ್ಡ್ ಸಂಧಿವಾತದಲ್ಲಿ (ಆಮವಾತ ) ಬಹಳ ಪರಿಣಾಮಕಾರಿಯಾಗಿದೆ . ರಾತ್ರಿಯಲ್ಲಿ ಬೆಚ್ಚಗಿನ ಕೇಸರಿ ಹಾಲನ್ನು ಬಳಸುವುದರಿಂದ ನೋವು ಕಡಿಮೆಯಾಗಿ ನಿದ್ದೆ ಬರುತ್ತದೆ .

ಆರೋಗ್ಯಕರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ:

ಇದು  ಅಗ್ನಿ ( ಮೆಟಬಾಲಿಸಮ್ ಮತ್ತು ಜೀರ್ಣಕ್ರಿಯೆ) ಮತ್ತು ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ .ಇದು ಅಜೀರ್ಣವನ್ನು ಕಡಿಮೆ ಮಾಡುತ್ತದೆ  , ಅತಿಸಾರ (ಭೇದಿ ), ವಾಂತಿ ಮತ್ತು ಅಸಿಡಿಟಿ  ಕಡಿಮೆ ಮಾಡುತ್ತದೆ .

ಮೂತ್ರದ ಹರಿವನ್ನು ಸರಾಗಗೊಳಿಸುತ್ತದೆ

ಇದು ಸುಲಭವಾಗಿ ಮೂತ್ರದ ಹರಿವಿಗೆ ಸಹಾಯ ಮಾಡುತ್ತದೆ . ಆದ್ದರಿಂದ ಮೂತ್ರ ಬಂಧದಲ್ಲಿ ಉಪಯೋಗಿಸುತ್ತಾರೆ

ಅತ್ಯುತ್ತಮ ಪುನರ್ಯೌವ್ವನಕರ

ಈ ಸುಂದರವಾದ ಕೆಂಪು ಕೇಸರಗಳು  ದೇಹವನ್ನು ಪುನಶ್ಚೇತನಗೊಳಿಸಲು ರಸಾಯನವಾಗಿ ಕಾರ್ಯ ನಿರ್ವಹಿಸುತ್ತವೆ . ಇವು  ದೇಹದ ರೋಗ ಕ್ಷಮತಾ ಶಕ್ತಿಯನ್ನು  ಹೆಚ್ಚಿಸುತ್ತವೆ  ಮತ್ತು ಶರೀರಕ್ಕೆ ಬಲವನ್ನು ನೀಡುತ್ತವೆ .

ಲೇಖಕರು : ಡಾ ।।ಸವಿತಾ ಸೂರಿ 

Free Ayurvedic Consultation
Call us at +91 9945995660 / +91 9448433911
Whats App + 91 6360108663


Chat with us!
Need help?
Hello!
How can we help you?