ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುವ ಉಪಾಯಗಳು


ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸಲು ಆಯುರ್ವೇದದಲ್ಲಿ ಹಲವಾರು ಉಪಾಯಗಳನ್ನು ತಿಳಿಸಿದ್ದಾರೆ . ಒಳ್ಳೆಯ ಆಹಾರ, ವ್ಯಾಯಾಮ , ಯೋಗ , ಧ್ಯಾನ , ಒತ್ತಡ ರಹಿತವಾಗಿರುವುದು ಇವೆಲ್ಲವೂ ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುವ ಉಪಾಯಗಳು.

Read this article in English Ayurvedic Treatment to Increase Male Libido

Read this article in Hindi  पुरुष कामेच्छा बढ़ाने के आयुर्वेदिक उपचार

ನಿಮಿರು ದೌರ್ಬಲ್ಯ (erectile dysfunction) ಅಥವಾ ಲೈಂಗಿಕ ದೌರ್ಬಲ್ಯ ಪುರುಷರನ್ನು ಅಧೀರನ್ನಾಗಿಸುತ್ತದೆ . ಆದರೆ ಇದನ್ನು ತಡೆಯಲು ಹಲವಾರು ಸುಲಭ ಉಪಾಯಗಳಿವೆ .ಇವುಗಳನ್ನು ನಿತ್ಯ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕೆಂದು ತಿಳಿದುಕೊಳ್ಳೋಣ

ವಿಷಯ ಸೂಚಿ

ವ್ಯಾಯಾಮ
ವ್ಯಸನಗಳಿಂದ ದೂರವಾಗಿರುವುದು
ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದು
ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು
ಡಯಾಬಿಟಿಸ್ ರೋಗವನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು
ಲೈಂಗಿಕ ಶಕ್ತಿ ಹೆಚ್ಚಿಸುವ ಆಹಾರಗಳು
ಲೈಂಗಿಕ ಶಕ್ತಿ ಹೆಚ್ಚಿಸುವ ಆಯುರ್ವೇದ ಮುಖ್ಯ ಮೂಲಿಕೆಗಳು

.

ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುವ ಉಪಾಯಗಳು

ವ್ಯಾಯಾಮ :

ಆಯುರ್ವೇದದ ಪ್ರಕಾರ ವ್ಯಾಯಾಮ ನಮ್ಮ ದಿನಚರಿಯಲ್ಲಿ ಒಂದು ಅವಿಭಾಜ್ಯ ಅಂಗವಾಗಿರಬೇಕು . ಪ್ರತಿದಿನ ಎಲ್ಲಾ ವಯಸ್ಸಿನವರೂ ತಮ್ಮ ಶಕ್ತಿಗೆ ತಕ್ಕಂತೆ ವ್ಯಾಯಾಮ ಮಾಡಲೇ ಬೇಕು . ಇದರಿಂದ ರಕ್ತ ಪರಿಚಲನೆ ಹೆಚ್ಚಾಗಿ ದೇಹದ ಅಂಗಗಳಿಗೆ , ಅಂಗಾಂಶಗಳಿಗೆ , ಜೀವಕೋಶಗಳಿಗೆ ಆಮ್ಲಜನಕ ಹೆಚ್ಚು ಹೆಚ್ಚಾಗಿ ಪೂರೈಕೆಯಾಗುತ್ತದೆ . ಹೆಚ್ಚಿದ ರಕ್ತ ಪರಿಚಲನೆ ಪುರುಷರ ಜನನಾಂಗಗಳನ್ನು ಸಧೃಡಗೊಳಿಸುತ್ತದೆ .  ವ್ಯಾಯಾಮದಿಂದ  ಹ್ಯಾಪಿ ಹಾರ್ಮೋನ್ ಗಳು ದೇಹದಲ್ಲಿ ಬಿಡುಗಡೆಯಾಗುತ್ತವೆ . ಇದರಿಂದ ಮನಸ್ಸಿನ ಒತ್ತಡ ಕಡಿಮೆಯಾಗಿ ಲೈಂಗಿಕ ಇಚ್ಛೆ ಹೆಚ್ಚುತ್ತದೆ .

.

ವ್ಯಸನಗಳಿಂದ ದೂರವಾಗಿರುವುದು :

ಸಿಗರೇಟು ಸೇವನೆ , ತಂಬಾಕು, ಗುಟ್ಕಾ , ಮದ್ಯ ಪಾನ , ಮಾದಕ ವಸ್ತುಗಳ ಚಟ ಇವುಗಳಿಂದ ದೂರವಿರಬೇಕು . ಈ ವ್ಯಸನಗಳು ತಾತ್ಕಾಲಿಕವಾಗಿ ಮನಸ್ಸನ್ನು ಹಗುರ ಗೊಳಿಸಿದರೂ , ಧೀರ್ಘಕಾಲಾವಧಿಯಲ್ಲಿ ಲೈಂಗಿಕ ಶಕ್ತಿಯನ್ನು ಬಲಿತೆಗೆದುಕೊಳ್ಳುತ್ತವೆ .

.

ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದು

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಪುರುಷನೂ ಒತ್ತಡದಲ್ಲಿ ಇರುತ್ತಾನೆ . ಇದು ಕೆಲಸದ ಒತ್ತಡವಾಗಿರಬಹುದು, ಕೌಟುಂಬಿಕ ಒತ್ತಡವಾಗಿರಬಹುದು ಅಥವಾ ಸಾಮಾಜಿಕ ಕಾರಣಗಳಿಂದ ಒತ್ತಡಕ್ಕೆ ಒಳಗಾಗಿರಬಹುದು . ಇದು ಗಂಡಸನ್ನು  ದುರ್ಬಲಗೊಳಿಸುತ್ತದೆ . ಆದ್ದರಿಂದ ಯೋಗ , ಧ್ಯಾನ  (ಮೆಡಿಟೇಶನ್ ),  ಪುಸ್ತಕಗಳನ್ನು  ಓದುವುದು ,  ಕುಟುಂಬದವರೊಂದಿಗೆ  ಗೆಳೆಯರೊಂದಿಗೆ ಬೆರೆಯುವುದು , ಸಂಗೀತವನ್ನು ಆಲಿಸುವುದು , ಉತ್ತಮ ಹವ್ಯಾಸಗಳಾದ ಪೈಂಟಿಂಗ್ , ಬರವಣಿಗೆ , ಗಿಡಗಳನ್ನು ಬೆಳಸುವುದು ಇತ್ಯಾದಿಗಳನ್ನು ರೂಡಿಸಿಕೊಳ್ಳುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ .ಮಾನಸಿಕ ಒತ್ತಡ ನಿದ್ರಾಹೀನತೆ ಉಂಟು ಮಾಡುತ್ತದೆ. ಸಾಕಷ್ಟು ನಿದ್ರೆ ಇಲ್ಲದೆ ಇದ್ದಾಗಲೂ ನಿಮಿರು ದೌರ್ಬಲ್ಯ ಉಂಟಾಗುತ್ತದೆ . ನಿದ್ರಾಹೀನತೆಗೆ ಅನೇಕ ಆಯುರ್ವೇದ ಚಿಕಿತ್ಸೆಗಳನ್ನು ಹೇಳಲಾಗಿದೆ.

.

ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು

ಅತಿಯಾದ ದೇಹದ ತೂಕದಿಂದ ಟೆಸ್ಟೋಸ್ಟೆರಾನ್ ಹಾರ್ಮೋನ್ ಕಡಿಮೆಯಾಗುವ ಸಾಧ್ಯತೆ ಇದೆ . ಆದ್ದರಿಂದ ದೇಹದ ತೂಕ ಕಡಿಮೆ ಮಾಡಿಕೊಂಡರೆ ಈ ಹಾರ್ಮೋನಿನ ಮಟ್ಟ ರಕ್ತದಲ್ಲಿ  ಗಣನೀಯವಾಗಿ ಏರಿಕೆಯಾಗುತ್ತದೆ . ಅಲ್ಲದೆ ದೇಹದ ತೂಕ ಕಡಿಮೆಯಾದಂತೆ ಡಯಾಬಿಟಿಸ್ ಹಾಗು ಹೃದ್ರೋಗಗಳ ಸಮಸ್ಯೆ ಬಹಳಷ್ಟು ದೂರವಾಗುತ್ತವೆ . ಉತ್ತಮ ಆರೋಗ್ಯಕರ ಆಹಾರ  ಹಾಗು  ವ್ಯಾಯಾಮದಿಂದ  ದೇಹದ ತೂಕವನ್ನು ಇಳಿಸಬಹುದು .ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಹರ್ಬಲ್ ಟೀ ಗಳನ್ನೂ ಸಹ ಉಪಯೋಗಿಸಬಹುದು.

.

ಡಯಾಬಿಟಿಸ್ ರೋಗವನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು

ರಕ್ತದಲ್ಲಿ ಮಿತಿಮೀರಿದ ಸಕ್ಕರೆಯ ಪ್ರಮಾಣ ನರಗಳನ್ನು ದುರ್ಬಲಗೊಳಿಸುತ್ತದೆ . ಇದರಿಂದ ಮೆದುಳಿಗೆ ಲೈಂಗಿಕ ಸಂಕೇತಗಳ ವರ್ಗಾವಣೆಯಲ್ಲಿ ಅಡಚಣೆಯಾಗುತ್ತದೆ ಹಾಗು ನಿಮಿರು ದೌರ್ಬಲ್ಯ ಉಂಟಾಗುತ್ತದೆ . ಆದರಿಂದ ವೇಳೆಗೆ ಸರಿಯಾಗಿ ಡಯಾಬಿಟಿಸ್ ಔಷಧಿಗಳನ್ನು ತೆಗೆದುಕೊಂಡು , ಆಹಾರದ ಪಥ್ಯ ಪಾಲಿಸಿ ರಕ್ತದಲ್ಲಿನ ಸಕ್ಕರೆಯ  ಪ್ರಮಾಣ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು

.

ಲೈಂಗಿಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು  ಸೇವಿಸುವುದು

ಲೈಂಗಿಕ ಶಕ್ತಿ ಹೆಚ್ಚಿಸುವ ಹಣ್ಣು , ಆಹಾರಗಳನ್ನು  ಸೇವಿಸುವುದರಿಂದ ದೇಹವು ಬಲಿಷ್ಠವಾಗಿ ಉತ್ಸಾಹವೂ ಹೆಚ್ಚುತ್ತದೆ . ಇಂತಹ ಆಹಾರಗಳ ಪಟ್ಟಿ ಇಲ್ಲಿ  ನೀಡಲಾಗಿದೆ .

ಹಾಲು
ತುಪ್ಪ  (ಹಸುವಿನ ತುಪ್ಪ ದಿನಕ್ಕೆ ೨ ಚಮಚೆಯಷ್ಟು ಮಾತ್ರ)
ಮೊಸರು
ಉದ್ದಿನ ಬೇಳೆ
ಹೆಸರು ಬೇಳೆ
ಹುರಳಿ ಕಾಳು
ಬೆಳ್ಳುಳ್ಳಿ
ಈರುಳ್ಳಿ
ಕ್ಯಾರೆಟ್
ಬಾಳೆಹಣ್ಣು
ಮಾವಿನ ಹಣ್ಣು
ದಾಳಿಂಬೆ
ದ್ರಾಕ್ಷಿ
ಒಣ ದ್ರಾಕ್ಷಿ
ಬಾದಾಮಿ
ಅಕ್ರೋಟು
ಟ್ಯೂನ ಮೀನು  ಇತ್ಯಾದಿ

ಇವುಗಳನ್ನು ದಿನ ನಿತ್ಯದ  ಆಹಾರದಲ್ಲಿ ಬಳಸಬೇಕು

.

ಲೈಂಗಿಕ ಶಕ್ತಿ ಹೆಚ್ಚಿಸುವ ಆಯುರ್ವೇದ ಮುಖ್ಯ ಮೂಲಿಕೆಗಳನ್ನು ಬಳಸುವುದು

ಅಶ್ವಗಂಧ
ಬೆಟ್ಟದ ನೆಲ್ಲಿಕಾಯಿ (ಆಮ್ಲ)
ಅಮೃತ ಬಳ್ಳಿ
ಬಿಳಿ ಮುಶಲಿ   ಇತ್ಯಾದಿ

ಆಯುರ್ವೇದೀಯ ಔಷಧಿಗಳನ್ನು  ಅಸಲೀ ಆಯುರ್ವೇದ ವೈದ್ಯರ ಸಲಹೆಯ ಮೇರೆಗೆ ಉಪಯೋಗಿಸಬೇಕು . ಸ್ವಯಂ ಔಷಧೀ ಸೇವನೆ ಒಳ್ಳೆಯದಲ್ಲ .

ಸಂಪರ್ಕಿಸಿ :
ಡಾ|| ಕೃಷ್ಣ ರಾವ್ ೯೯೪೫೯೯೫೬೬೦  (9945995660 / 9448433911 )

ವಾಟ್ಸಾಪ್ 9945995660 / 9448433911

email:  drkrishnars@gmail.com


Chat with us!
Need help?
Hello!
How can we help you?