ಆಚಾರ್ಯ ಚರಕರು ಈ ಸಸ್ಯವನ್ನು ಬಲ್ಯ ಮತ್ತು ಬೃಹ್ಮಣೀಯ ಎಂದು ವರ್ಗೀಕರಿಸಿದ್ದಾರೆ . ಬಲ್ಯ ಎಂದರೆ ದೇಹವನ್ನು ಬಲಪಡಿಸಿ ,ಶಕ್ತಿ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುವ ಗಿಡಮೂಲಿಕೆಗಳು ಎಂದರ್ಥ . ಬೃಹ್ಮಣೀಯ ಎಂದರೆ ಆರೋಗ್ಯಕರವಾಗಿ ದೇಹದ ತೂಕವನ್ನು ಹೆಚ್ಚಿಸುವ ಗಿಡಮೂಲಿಕೆಗಳು ಎಂದರ್ಥ. ಆದ್ದರಿಂದ ಈ ಮೂಲಿಕೆಯನ್ನು ಸಾಮಾನ್ಯವಾಗಿ ದೇಹದ ತೂಕ ಹೆಚ್ಚಿಸುವ ಆಯುರ್ವೇದೀಯ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ .
ಹೆಚ್ಚಿನ ಮಾಹಿತಿ:-
- ಅಶ್ವಗಂಧ ಕ್ಷೀರಪಾಕ – ಮೂನ್ ಮಿಲ್ಕ್ ಅಥವಾ ಅಶ್ವಗಂಧ ಹಾಲಿನ ಪ್ರಯೋಜನಗಳು
- ಅಶ್ವಗಂಧ ಕ್ಯಾಪ್ಸುಲ್ ಅಥವಾ ಗುಳಿಗೆಗಳ ಉಪಯೋಗಗಳು
ಅಶ್ವಗಂಧದ ಉಪಯೋಗಗಳು
ಈ ಸಸ್ಯದ ಔಷಧೀಯ ಗುಣಗಳಿಗೆ ಅದರಲ್ಲಿರುವ ವಿಥನೊಲೈಡ್ಸ್ ಎಂದು ಕರೆಯಲ್ಪಡುವ ರಾಸಾಯನಿಕ ಸಂಯುಕ್ತಗಳೇ ಕಾರಣ.
ಆಯುರ್ವೇದ ಆಚಾರ್ಯರು ಅಶ್ವಗಂಧದ ಔಷಧೀಯ ಗುಣಗಳನ್ನು ಕೆಳಕಂಡಂತೆ ಶ್ಲಾಘಿಸಿದ್ದಾರೆ .
ಪುರುಷರ ಆರೋಗ್ಯಕ್ಕಾಗಿ ಅಶ್ವಗಂಧ
ಈ ಮೂಲಿಕೆಯನ್ನು “ವಾಜೀಕರ” ಎಂದು ಆಚಾರ್ಯರು ಹೊಗಳಿದ್ದಾರೆ . ವಾಜೀಕರ ಎಂದರೆ ಕಾಮೋತ್ತೇಜಕ ಎಂದು. ಅಲ್ಲದೆ ಇದನ್ನು “ಅತಿ ಶುಕ್ರಲಾ” ಎಂದೂ ಸಹ ಬಣ್ಣಿಸಿದ್ದಾರೆ . ಎಂದರೆ ಇದು ಶುಕ್ರಧಾತು ಅಥವಾ ಗಂಡಸರಲ್ಲಿ ವೀರ್ಯವನ್ನು ಉತ್ತಮಗೊಳಿಸುತ್ತದೆ . ಆಯುರ್ವೇದ ವೈದ್ಯರು, ಅಶ್ವಗಂಧ ವೀರ್ಯಾಣು ಸಂಖ್ಯೆ ಹೆಚ್ಚಿಸುವಲ್ಲಿ ಹಾಗು ಚಲನಶೀಲತೆ ವೃದ್ಧಿ ಪಡಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ . ಆಯುರ್ವೇದದ ವಾಜೀಕರಣ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ . ಅಲ್ಲದೆ ಇದು ಪುರುಷರ ನಿಮಿರು ದೌರ್ಬಲ್ಯ ಹಾಗು ಶೀಘ್ರ ಸ್ಖಲನ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ . ಅಲ್ಲದೆ ಇದು ಲೈಂಗಿಕ ಶಕ್ತಿಯನ್ನೂ ಹೆಚ್ಚಿಸುತ್ತದೆ
ಪಿ.ಸಿ.ಓ.ಎಸ್ ಮತ್ತು ಸ್ತ್ರೀ ಕಾಮಾಸಕ್ತಿ ಹೆಚ್ಚಿಸಲು ಅಶ್ವಗಂಧ
ಈ ಮೂಲಿಕೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಗರ್ಭಕೋಶವನ್ನು ಬಲ ಪಡಿಸಿ ಪಿ. ಸಿ. ಓ. ಎಸ್ ( PCOS / PCOD ) ತೊಂದರೆಯನ್ನು ನಿವಾರಿಸಲು ಸಹಕರಿಸುತ್ತದೆ . ಅಲ್ಲದೆ ಸ್ತ್ರೀಯರಲ್ಲಿ ಕಾಮಾಸಕ್ತಿಯನ್ನೂ ಹೆಚ್ಚಿಸುತ್ತದೆ .
ಕೀಲು ನೋವು ನಿವಾರಕ :
ಇದು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ . ಅಶ್ವಗಂಧವನ್ನು ಆಯುರ್ವೇದದಲ್ಲಿ ಸಂಧಿವಾತದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದು ಕೀಲುಗಳ ಉರಿಯೂತವನ್ನು ಕಡಿಮೆ ಮಾಡಿ , ಅವುಗಳ ಚಲನೆಯನ್ನು ಸರಾಗಗೊಳಿಸುತ್ತದೆ. ಅಲ್ಲದೆ ಕೀಲುಗಳ ಚಲನೆಗೆ ಸಹಾಯ ಮಾಡುವ ಮಾಂಸ ಖಂಡ ಹಾಗು ಸ್ನಾಯುಗಳನ್ನು ಬಲಪಡಿಸುತ್ತದೆ.
ರಕ್ತದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡಲು
ಈ ಮೂಲಿಕೆ ಹೃದಯಕ್ಕೆ ಹಿತಕಾರಿಯಾಗಿದೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಈ ಸಸ್ಯವು ಸಹಾಯ ಮಾಡುತ್ತದೆ ಎಂದು ವಿವಿಧ ಸಂಶೋಧನೆಗಳು ತೋರಿಸಿವೆ . ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮೂತ್ರವರ್ಧಕವಾಗಿಯೂ ಕಾರ್ಯನಿರ್ವಹಿಸುತ್ತದೆ.
ಆತಂಕ ಮತ್ತು ಖಿನ್ನತೆಯಲ್ಲಿ
ಇದು ವಾತ ಮತ್ತು ಕಫವನ್ನು ಸಮತೋಲನಗೊಳಿಸುವುದರಿಂದ, ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ನೀಡುತ್ತದೆ . ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ಒತ್ತಡವನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ನಿದ್ರಾಜನಕವಾಗಿ ಕಾರ್ಯ ನಿರ್ವಹಿಸುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಈ ಮೂಲಿಕೆಯಿಂದ ಪ್ರಯೋಜನವಿದೆ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ . ಈ ಸಸ್ಯವನ್ನು ಮರೆವಿನ ಕಾಯಿಲೆ ಮತ್ತು ನಿದ್ರಾಹೀನತೆಯಲ್ಲಿ ಬಳಸಬಹುದು.
ದೇಹವನ್ನು ಪುನರ್ಯವ್ವನಗೊಳಿಸುತ್ತದೆ .
ಈ ಅದ್ಭುತ ಮೂಲಿಕೆಯನ್ನು “ರಸಾಯನ” ಎಂದು ಆಯುರ್ವೇದ ಪಠ್ಯಗಳಲ್ಲಿ ಹೊಗಳಲಾಗಿದೆ . ಇದನ್ನುನಿಯಮಿತವಾಗಿ ಬಳಸಿದಾಗ ದೇಹದ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ದೋಷ ಗಳನ್ನು ಸಮತೋಲನಗೊಳಿಸುತ್ತದೆ ಮತ್ತು ದೇಹದ ಅಂಗಾಂಶಗಳನ್ನು ಪುಷ್ಟಿಗೊಳಿಸುತ್ತದೆ . ಅರೋಗ್ಯ ಮತ್ತು ಯವ್ವನ ಕಾಪಾಡಿಕೊಳ್ಳಲು ಇದು ಅತ್ಯುತ್ತಮ ಮೂಲಿಕೆ .
ಮಧುಮೇಹ ಅಥವಾ ಡಯಾಬಿಟಿಸ್ ನಲ್ಲಿ ಅಶ್ವಗಂಧ:
ಈ ಮೂಲಿಕೆಯ ಬೇರು ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು (ಡಯಾಬಿಟಿಸ್ಅಥವಾ ಸಕ್ಕರೆ ಖಾಯಿಲೆ) ಸುಧಾರಿಸುತ್ತದೆ. ಇದನ್ನು ಮಧುಮೇಹದಲ್ಲಿ ಸಹಾಯಕ ಚಿಕಿತ್ಸೆಯಾಗಿ ಬಳಸಬಹುದು.
ಉಸಿರಾಟದ ತೊಂದರೆಗಳಿಗೆ :
ಈ ಮೂಲಿಕೆ ಶ್ವಾಸಕೋಶಗಳನ್ನು ಬಲಪಡಿಸುತ್ತದೆ ಮತ್ತು ಅವುಗಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸಾಮಾನ್ಯ ಕೆಮ್ಮು ಮತ್ತು ಶೀತವನ್ನು ಬರದಂತೆ ತಡೆಯುತ್ತದೆ.
ಉತ್ತಮ ಜೀರ್ಣಕ್ರಿಯೆಗೆ
ಅಶ್ವಗಂಧ ಹಸಿವನ್ನು ಹೆಚ್ಚಿಸುತ್ತದೆ. ಇದು ಜೀರ್ಣಕ್ರಿಯೆ ಮತ್ತು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ . ಅಲ್ಲದೆ ಮಲಬದ್ಧತೆಯನ್ನು ನಿವಾರಿಸುತ್ತದೆ. ಹಲವು ಪುರುಷರಲ್ಲಿ ಮಲಬದ್ದತೆಯಿಂದ ನಿಮಿರು ದೌರ್ಬಲ್ಯ ಉಂಟಾಗಬಹುದು . ಅಂತಹವರಿಗೆ ಇದು ಬಹಳ ಉಪಯುಕ್ತವಾಗಿದೆ.
ಉತ್ತಮ ಆರೋಗ್ಯಕ್ಕಾಗಿ :
ಇದು ಬಲ್ಯವಾಗಿ ಕಾರ್ಯನಿರ್ವಹಿಸುತ್ತದೆ ಎಂದರೆ ದೇಹವನ್ನು ಬಲಪಡಿಸುತ್ತದೆ. ಅಶ್ವಗಂಧ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ ಮತ್ತು ಅದನ್ನು ಬಲಪಡಿಸುತ್ತದೆ. ಇದು ದೇಹದ ಶಕ್ತಿಯ ಮಟ್ಟವನ್ನೂ ಹೆಚ್ಚಿಸುತ್ತದೆ. ಇದು ಅತ್ಯುತ್ತಮ ಡಿಟಾಕ್ಸ್ ಮೂಲಿಕೆಯಾಗಿಯೂ ಕಾರ್ಯನಿರ್ವಹಿಸುತ್ತದೆ . ಅಶ್ವಗಂಧ ದೇಹದಲ್ಲಿನ ವಿಷಯುಕ್ತ ರಾಸಾಯನಿಕಗಳನ್ನು ಹೊರಹಾಕಿ ದೇಹದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
- ಅಶ್ವಗಂಧ ಕ್ಷೀರಪಾಕ – ಮೂನ್ ಮಿಲ್ಕ್ ಅಥವಾ ಅಶ್ವಗಂಧ ಹಾಲಿನ ಪ್ರಯೋಜನಗಳು
- ಅಶ್ವಗಂಧ ಕ್ಯಾಪ್ಸುಲ್ ಅಥವಾ ಗುಳಿಗೆಗಳ ಉಪಯೋಗಗಳು
ಅಶ್ವಗಂಧವು ಒಂದು ಅದ್ಭುತ ಸಸ್ಯವಾಗಿದೆ, ಇದರ ಪ್ರಯೋಜನಗಳನ್ನು ಆಯುರ್ವೇದದಲ್ಲಿ ಚೆನ್ನಾಗಿ ವಿವರಿಸಲಾಗಿದೆ. ಈ ಸಸ್ಯವನ್ನು ಇಂಡಿಯನ್ ವಿಂಟರ್ ಚೆರ್ರಿ ಎಂದೂ ಕರೆಯುತ್ತಾರೆ ಮತ್ತು ಇದರ ವೈಜ್ಞಾನಿಕ ಹೆಸರು ವಿಥಾನಿಯಾ ಸೊಮ್ನಿಫೆರಾ. ಇದು ಸೋಲನೇಸ್ ಕುಟುಂಬಕ್ಕೆ ಸೇರಿದ ಪೊದೆ ಸಸ್ಯವಾಗಿದ್ದು, ಪಶ್ಚಿಮ ಭಾರತ, ಗುಜರಾತ್, ಪಂಜಾಬ್ ಮತ್ತು ಹಿಮಾಲಯದಲ್ಲಿ ಬೆಳೆಯಲಾಗುತ್ತದೆ. ಆಯುರ್ವೇದ ಔಷಧೀಯ ತಯಾರಿಕೆಯಲ್ಲಿ ಇದರ ಬೇರುಗಳನ್ನು ಬಳಸಲಾಗುತ್ತದೆ. ಇದರ ಬೇರಿನ ಪುಡಿಗೆ ಅಶ್ವಗಂಧ ಚೂರ್ಣ ಅಥವಾ ಅಶ್ವಗಂಧ ಪುಡಿ ಎನ್ನುತ್ತಾರೆ.
ಅಶ್ವಗಂಧದ ಬೇರುಗಳಿಗೆ ಕುದುರೆಯ ಮೂತ್ರದ ವಾಸನೆ ಇರುವುದರಿಂದ ಈ ಹೆಸರು ಬಂದಿದೆ. (ಅಶ್ವ = ಕುದುರೆ, ಗಂಧ = ವಾಸನೆ). ಇದರ ಎಲೆಗಳು ಹಂದಿಗಳ ಕಿವಿಯನ್ನು ಹೋಲುವ ಕಾರಣ ಇದನ್ನು ವರಹಾ ಕರ್ಣಿ ಎಂಬ ಇನ್ನೊಂದು ಹೆಸರಿನಿಂದ ಕರೆಯಲಾಗುತ್ತದೆ. ಈ ಮೂಲಿಕೆ ಜೀರ್ಣಿಸಿಕೊಳ್ಳಲು ಹಗುರವಾಗಿರುತ್ತದೆ . ಇದು ಅಂಗಾಂಶಗಳ ಆರ್ದ್ರತೆಯನ್ನು ಹೆಚ್ಚಿಸುತ್ತದೆ (ಸ್ನಿಗ್ಧಾ). ಇದು ಕಹಿ ಮತ್ತು ಸಿಹಿ ಎರಡೂ ರುಚಿಗಳನ್ನೂ ಹೊಂದಿದೆ . ಆದರೆ ಪಚನಾನಂತರ ಸಿಹಿ ರುಚಿ ಮೇಲುಗೈ ಸಾಧಿಸುತ್ತದೆ. ಈ ಸಸ್ಯದ ಮೂಲವನ್ನು ಮುಖ್ಯವಾಗಿ ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ .
ಅಶ್ವಗಂಧದ ಬೇರಿನ ಹುಡಿ
ಅಶ್ವಗಂಧ ಚೂರ್ಣ ಅದರ ಬೇರಿನಿಂದ ತಯಾರಿಸಲಾಗುತ್ತದೆ . ಇದನ್ನು ಅಶ್ವಗಂಧ ರೂಟ್ ಪೌಡರ್ಎನ್ನುತ್ತಾರೆ . ಸಾಮಾನ್ಯವಾದ ಅಶ್ವಗಂಧ ಚೂರ್ಣಕ್ಕಿಂತ , ಅದರ ಬೇರಿನ ಚೂರ್ಣದಲ್ಲಿ ಉತ್ತಮವಾದ ಔಷಧೀಯ ಗುಣಗಳಿರುತ್ತವೆ .
- ಇದನ್ನು ಮುಖ ಲೇಪ ಅಥವಾ ಫೇಸ್ ಪ್ಯಾಕ್ ನಂತೆ ಬಳಸಬಹುದು – ಇದರಿಂದ ಮುಖದ ಚರ್ಮ ಕಾಂತಿಯುತವಾಗಿ ಆರೋಗ್ಯಕರವಾಗಿರುತ್ತದೆ
- ಇದನ್ನು ಸೌಂದರ್ಯ ಪ್ರಸಾದನಗಳಲ್ಲೂ (ಕಾಸ್ಮೆಟಿಕ್ಸ್) ಬಳಸುತ್ತಾರೆ. ಇವುಗಳಲ್ಲಿ ಅಶ್ವಗಂಧ ಫೇಸ್ ಕ್ರೀಮ್ ( Ashwagandha Cream) ಬಹಳ ಉತ್ತಮವಾದದ್ದು .
- ಈ ಪುಡಿಯನ್ನು ನಿಮಿರು ದೌರ್ಬಲ್ಯ, ಶೀಘ್ರಸ್ಖಲನ ಹಾಗು ವೀರ್ಯಾಣುಗಳ ಸಂಖ್ಯೆ ಹಾಗು ಚಲನೆ ಕಮ್ಮಿ ಇರುವಾಗಲೂ ಬಳಸುತ್ತಾರೆ . ಅಂತಹ ಸಮಯದಲ್ಲಿ ಆಯುರ್ವೇದ ಆಚಾರ್ಯರು, ಹಾಲಿನೊಡನೆ ಅಶ್ವಗಂಧದ ಬೇರಿನ ಚೂರ್ಣವನ್ನು ಕುದಿಸಿ ತಯಾರಾದ ಅಶ್ವಗಂಧ ಕ್ಷೀರಪಾಕ ಉಪಯೋಗಿಸುವಂತೆ ಸಲಹೆ ನೀಡಿರುತ್ತಾರೆ.
ಸೂಚನೆ – ನೀವು ಸೇವಿಸಬೇಕಾದ ಅಶ್ವಗಂಧದ ಪ್ರಮಾಣವನ್ನು ಕುರಿತು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, ವಿಶೇಷವಾಗಿ ನೀವು ಗರ್ಭಿಣಿಯಾಗಿದ್ದರೆ ಅಥವಾ ಹಾಲುಣಿಸುವ ತಾಯಿಯಾಗಿದ್ದರೆ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ನಂತರ ಉಪಯೋಗಿಸಿ
Call us at +91 9945995660 / +91 9448433911
Whats App + 91 6360108663/